ಕಮಿಷನ್ ಆಮಿಷವೊಡ್ಡಿ 25.92ಲಕ್ಷ ರೂ. ವಂಚನೆ

cen police station
Published on

ಶಿವಮೊಗ್ಗ: ಗೂಗಲ್‌ನಲ್ಲಿ ಹೋಟೆಲ್‌ಗಳಿಗೆ ರಿವ್ಯೆ ಬರೆದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ಆಮಿಷವೊಡ್ಡಿ, ಶಿವಮೊಗ್ಗದ ಬಿ.ಬಿ.ಸ್ಟ್ರೀಟ್‌ನ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 25.92ಲಕ್ಷ ರೂ. ವಂಚಿಸಲಾಗಿದೆ.

ದೂರುದಾರರು ಟೆಲಿಗ್ರಾಂ ಖಾತೆಯೊಂದಕ್ಕೆ ಸೇರಿದ್ದರು. ಆ ಖಾತೆಯಲ್ಲಿ ಸಕ್ರಿಯರಾಗಿದ್ದ ವಂಚಕರು, ಗೂಗಲ್‌ನಲ್ಲಿ ಹೋಟೆಲ್‌ಗಳ ಬಗ್ಗೆ ರಿವ್ಯೆ ನೀಡಿದರೆ ದೊಡ್ಡ ಮೊತ್ತದ ಕಮಿಷನ್ ಸಿಗುತ್ತದೆಂದು ದೂರುದಾರರನ್ನು ನಂಬಿಸಿದ್ದಾರೆ. ಅದನ್ನು ನಂಬಿದ ದೂರುದಾರರಿಂದ ಹಂತ ಹಂತವಾಗಿ 25,92,210 ರೂ. ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಆದರೆ, ಹಣ ವರ್ಗಾವಣೆಯಾದ ನಂತರವೂ ವಂಚಕರು ಹೋಟೆಲ್ ರಿವ್ಯೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಷ್ಟೇ ಅಲ್ಲದೆ, ಪಡೆದ ಹಣವನ್ನು ಹಿಂದಿರುಗಿಸದೆ, ಮತ್ತೆ ಹಣ ನೀಡುವಂತೆ ದೂರುದಾರರಿಗೆ ಮೆಸೇಜ್ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ದೂರುದಾರರು, ತಾವು ವಂಚನೆಗೊಳಗಾಗಿರುವುದನ್ನು ಅರಿತು, ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net