ಕರ್ನಾಟಕದ ಪುಣ್ಯಭೂಮಿಯಲ್ಲಿ ಜನಿಸಿದ ಅನೇಕ ನಟ-ನಟಿಯರು ಪರಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದರೂ ಆಯಾ ಭಾಷೆಯನ್ನು ಗೌರವಿಸಿದ್ದಾರೆ. ಆದರೆ ಕಮಲ್‌ಹಾಸನ್ ಕನ್ನಡ ಚಿತ್ರಗಳಲ್ಲೂ ನಟಿಸಿಯೂ ಕೂಡಾ ತಮಿಳಿನಿಂದ ಕನ್ನಡ ಜನಿಸಿತು ಎಂಬ ಹೇಳಿಕೆ ನೀಡುವುದು ತೀವ್ರ ಖಂಡನೀಯ ಎಂದು ಹೇಳಿ ದರು.
ಕಮಲ್‌ರ ಹೇಳಿಕೆ ನೇರವಾಗಿ ಆರೂವರೆ ಕೋಟಿ ಕನ್ನಡಿಗರು ಹಾಗೂ ಭಾಷಾ ಇತಿಹಾಸಕಾರರಿಗೆ ನೇ ರವಾಗಿ ನೋವುಂಟಾಗಿದೆ. ಈ ಸಂಬAಧ ಪತ್ರಿಕಾಗೋಷ್ಠಿಗಳಲ್ಲಿ ಕಮಲ್ ಹೇಳಿಕೆ ಬಗ್ಗೆ ಕ್ಷಮೆ ಕೇಳದೇ ಸಮ ರ್ಥನೆಗೆ ಮುಂದಾಗಿರುವುದು ಸರಿಯಲ್ಲ. ಕನ್ನಡಕ್ಕೆ ವಿಶಿಷ್ಟ ಸ್ಥಾನಮಾನ ಇರುವುದರಿಂದ ನೋಟಿನಲ್ಲಿ ಕನ್ನಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ ಎಂದರು.
ಹೀಗಾಗಿ ನಟ ಕಮಲ್ ಹಾಸನ್ ಸಾರ್ವಜನಿಕರ ಎದುರು ಬಹಿರಂಗವಾಗಿ ಕ್ಷಮೆಯಾಚಿಸಿದರೆ ಒಳಿತು. ಇಲ್ಲವಾದರೆ ಕಮಲ್ ನಟನೆಯ ಯಾವುದೇ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆಗೊಳಿಸಲು ಬಿಡದೇ ಎಲ್ಲಾ ಚಿತ್ರ ಮಂದಿರಗಳಲ್ಲಿ ಪ್ರತಿಭಟಿಸಿ ನಿಷೇಧ ಹೇರಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಕಾರ್ಯದರ್ಶಿ ರವಿಚಂದ್ರ, ಮುಖಂಡರಾದ ಮಂಜುನಾಥ್, ಸತೀಶ್, ಹಾಲಪ್ಪ, ಅಭಿ, ಪೂರ್ಣೇಶ್, ನಟರಾಜ್, ಅರುಣ್‌ಕುಮಾರ್, ಭರತ್, ಚಂದ್ರು, ಉಮೇಶ್ ಮತ್ತಿತರರಿದ್ದರು.