ಕಮಲಿಬಾಯಿ ಸಾರಥ್ಯಕ್ಕೆ ಸುಕಿರ್ತಾ ಸಾಥ್

0708 Chincholi 01
ಐನೋಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಕಮಲಿಬಾಯಿ ಪವಾರ್, ಉಪಾಧ್ಯಕ್ಷೆಯಾಗಿ ಸುಕಿರ್ತಾ ಗಾರಂಪಳ್ಳಿ ಆಯ್ಕೆಯಾಗುತ್ತಿದ್ದಂತೆ ಸಂಭ್ರಮಿಸಲಾಯಿತು. ಬಿಜೆಪಿ ಮುಖಂಡ ರಾಮಚಂದ್ರ ಜಾಧವ್, ಕಾಂಗ್ರೆಸ್ ಮುಖಂಡ ಅಜೀತ ಪಾಟೀಲ್, ಭೀಮಶೆಟ್ಟಿ ಮುರುಡಾ, ಮಶಾಕ್ ಪಟೇಲ್, ಶ್ರೀಮಂತ ಕಟ್ಟಿಮನಿ ಇತರರಿದ್ದರು.
Published on

ಚಿಂಚೋಳಿ: ಐನೋಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ನಾಲ್ವರು ಸದಸ್ಯರ ಅಪಹರಣ ಪ್ರಕರಣ ಸೋಮವಾರ ಅಂತ್ಯ ಕಂಡಿದೆ.

ಎರಡನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಪಹೃತ ಸದಸ್ಯರು ಸಹ ಭಾಗವಹಿಸಿದರು. ಆ.೪ರಂದು ಕಿಡ್ನ್ಯಾಪ್ ಮಾಡಿ ಪುಣೆಯ ಲಾಡ್ಜ್ ಒಂದರಲ್ಲಿ ಇರಿಸಲಾಗಿತ್ತು ಎನ್ನಲಾದ ಸದಸ್ಯರನ್ನು ೬ರಂದು ಅಪಹರಣಕಾರರು ಕಲಬುರಗಿಗೆ ತಂದು ಬಿಟ್ಟಿದ್ದು, ಇದೀಗ ಅಧ್ಯಕ್ಷೆಯಾಗಿ ಕಮಲಿಬಾಯಿ ಪವಾರ್, ಉಪಾಧ್ಯಕ್ಷೆಯಾಗಿ ಸುಕಿರ್ತಾ ಗಾರಂಪಳ್ಳಿ ಅವಿರೋಧ ಆಯ್ಕೆಯಾಗುವ ಮೂಲಕ ಪ್ರಕರಣಕ್ಕೆ ತೆರೆ ಬಿದ್ದಿದೆ.

೧೮ ಸದಸ್ಯ ಬಲದ ಪಂಚಾಯಿತಿಯಲ್ಲಿ ೧೧ ಸದಸ್ಯರು ಕಮಲಿಬಾಯಿಗೆ ಬೆಂಬಲ ಸೂಚಿಸಿದರು. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸುಕಿರ್ತಾ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿ ಅವಿರೋಧ ಆಯ್ಕೆ ಪ್ರಕಟಿಸಿದರು. ಏಳು ಸದಸ್ಯರು ಗೈರಾಗಿದ್ದರು.

ಪ್ರಮುಖರಾದ ರಾಮಚಂದ್ರ ಜಾಧವ್, ಅಜೀತ ಪಾಟೀಲ್, ಭೀಮಶೆಟ್ಟಿ ಮುರುಡಾ, ಮಶಾಕ್ ಪಟೇಲ್, ಬಸವರಾಜ ಐನೋಳ್ಳಿ, ಕೆ.ಎಂ. ಬಾರಿ, ಶ್ರೀಮಂತ ಕಟ್ಟಿಮನಿ, ಆಕಾಶ ಕೊಳ್ಳೂರ, ಶ್ರೀನಿವಾಸ ಚಿಂಚೋಳಿಕರ್, ಶಿವಕುಮಾರ, ರಾಜು ಪವಾರ್, ಅಶೋಕ ಚವ್ಹಾಣ್, ರಾಜರೆಡ್ಡಿ, ಶೇಖ್ ಭಕ್ತಿಯಾರ್ ಜಹಾಗೀರದಾರ್, ಶ್ರೀನಿವಾಸ ದರವೇಶ ಇತರರಿದ್ದರು.

ಚುನಾವಣೆ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಗ್ರಾಪಂ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕೇರಳ್ಳಿ: ಗ್ರಾಪಂ ಅಧ್ಯಕ್ಷರಾಗಿ ರವೀಂದ್ರಕುಮಾರ ಕೊರಡಂಪಳ್ಳಿ, ಉಪಾಧ್ಯಕ್ಷರಾಗಿ ಸಂಗೀತಾ ಪೂಜಾರಿ ಅವಿರೋಧ ಅಯ್ಕೆಯಾಗಿದ್ದಾರೆ. ತಾಪಂ ಇಒ ಶಂಕರ ರಾಠೋಡ್, ಶ್ರೀಪತರಾವ, ಸೈಯದ್ ಫಯಾಜೋದ್ದಿನ್ ಚುನಾವಣೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಬೆಂಬಲಿತರು ಆಯ್ಕೆಗೊಳ್ಳುತ್ತಿದ್ದಂತೆ ಅಶೋಕರೆಡ್ಡಿ ಕೇರಳ್ಳಿ, ರವೀಂದ್ರ ಬೈನೂರ, ಅಂಬಣ್ಣ ಕೊರಡಂಪಳ್ಳಿ, ಅರುಣಕುಮಾರ ದೇಸಾಯಿ, ಬಸವರಾಜ ಸುಲೇಪೇಟ್, ಮಲ್ಲಿಕಾರ್ಜುನ ಪಟವಾನ್ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಸಲಗರ ಬಸಂತಪುರ: ಗ್ರಾಪಂ ಅಧ್ಯಕ್ಷರಾಗಿ ಸರಸ್ವತಿಬಾಯಿ ನಾರಾಯಣ, ಉಪಾಧ್ಯಕ್ಷರಾಗಿ ಸರೋಜಾಬಾಯಿ ಶಶಿಕಾಂತ ಅವಿರೋಧ ಆಯ್ಕೆಯಾಗಿದ್ದಾರೆ. ರಾಜಕುಮಾರ ಗೋವಿನ್ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಬಳಿಕ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net