ಕಮಲಾಪುರ ಪ್ರಥಮ ಸಾಹಿತ್ಯ ಸಮ್ಮೇಳನ ಶೀಘ್ರ

klb1
ಕಮಲಾಪುರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿದರು. ನಿಂಗಪ್ಪ ಪ್ರಬುದ್ಧಕರ್, ಶಿವಲಿಂಗ ಬೆಳಕೋಟಾ, ಸತೀಶ ಜಾಧವ್, ರವೀಂದ್ರ ಬಿ.ಕೆ., ಪ್ರಶಾಂತ ಮಾನಕರ್, ಕಸ್ತೂರಿ ಬಾಯಿ ಇದ್ದರು.
Published on

ಕಮಲಾಪುರ: ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಐತಿಹಾಸಿಕ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಮನವಿ ಮಾಡಿದರು.

ಕನ್ನಡ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶೀಘ್ರ ದಿನಾಂಕ ನಿಗದಿ ಪಡಿಸಲಾಗುವುದು. ಮಾದರಿ ಸಮ್ಮೇಳನಕ್ಕೆ ಎಲ್ಲರ ಸಲಹೆ- ಸೂಚನೆ ಅಗತ್ಯವಾಗಿದೆ. ಬಳಿಕ ಸಮ್ಮೇಳನ ಸರ್ವಾಧ್ಯಕ್ಷ, ಸ್ವಾಗತಿ ಸಮಿತಿ ಅಧ್ಯಕ್ಷ ಹಾಗೂ ಸ್ಥಳ ನಿಗದಿ ಪಡಿಸಲಾಗುವುದು ಎಂದು ಹೇಳಿದರು.

ಕಸಾಪ ಸಹ ಕಾರ್ಯದರ್ಶಿ ಆನಂದ ವಾರೀಕ್ ಮಾತನಾಡಿ, ತಾಲೂಕಿನಲ್ಲಿ ಎಲೆಮರೆ ಕಾಯಿಯಂತೆ ಕನ್ನಡ ಸೇವೆ ಮಾಡುತ್ತಿರುವ ಹಾಗೂ ಭಾಷೆ ಉಳಿವಿಗಾಗಿ ಹೋರಾಡಿತ್ತಿರುವವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಿಣ್ಣಿಸಡಕ್ ಗ್ರಾಪಂ ಮಾಜಿ ಅಧ್ಯP್ಷÀ ನಿಂಗಪ್ಪ ಪ್ರಬುದ್ಧಕರ್ ಮಾತನಾಡಿದರು.

ಪ್ರಮುಖರಾದ ಮಲ್ಲಿಕಾರ್ಜುನ ಗಣಮುಖಿ, ತಯ್ಯಬ್ ಚೌದ್ರಿ, ಶಿವಲಿಂಗ ಬೆಳಕೋಟಾ, ಸತೀಶ ಜಾಧವ್, ಚೇತನ ಮಹಾಜನ್, ಅಮರ ಪಟ್ನಾಯಕ್, ಸಂಜಯಕುಮಾರ ನಾಟಿಕಾರ, ಮಲ್ಲಿಕಾರ್ಜುನ ಅಂಬಲಗಿ ಇತರರಿದ್ದರು. ಮಹಿಳಾ ಪ್ರತಿನಿಧಿ ಕಸ್ತೂರಿಬಾಯಿ ರಾಜೇಶ್ವರ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಬಿ.ಕೆ. ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪ್ರಶಾಂತ ಮಾನಕರ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net