

ಕಮಲಾಪುರ: ಹರಸೂರ ಗ್ರಾಮದ ರೈತರೊಬ್ಬರ ತೋಟದಲ್ಲಿ ನಡೆದಿದ್ದ ಕೃಷಿ ಪರಿಕರಗಳ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಕಳ್ಳನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕೇರೂರ ತಾಂಡಾದ ಕೇಸು ರಾಠೋಡ್ (35) ಬಂಧಿತ. ತಿಂಗಳ ಹಿಂದೆ ಹರಸೂರ ಗ್ರಾಮದ ಸರ್ವೇ ನಂ. 205ರಲ್ಲಿ 60 ಪೈಪ್, 10 ಸ್ಪಿಂಕ್ಲರ್ ಕಳ್ಳತನಾಗಿತ್ತು. ಈ ಬಗ್ಗೆ ಮಹಾಗಾಂವ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು.
ಪಿಎಸ್‌ಐಗಳಾದ ಆಶಾ ರಾಠೋಡ್, ಶಿವಶಂಕರ ಸುಬೇದಾರ್ ನೇತೃತ್ವದಲ್ಲಿ ಸಿಬ್ಬಂದಿ ಶ್ರೀಮಂತರಾಯ, ಅಮರನಾಥ, ಅಶೋಕ, ಶ್ರವಣಕುಮಾರ, ಸೋಮನಾಥ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. 30 ಸಾವಿರ ರೂ. ಮೌಲ್ಯದ 60 ಪೈಪ್, 10 ಸ್ಪಿಂಕ್ಲರ್ ವಶಕ್ಕೆ ಪಡೆಯಲಾಗಿದೆ.