

ಕಮಲಾಪುರ: ತಾಲೂಕಿನ ವ್ಯಾಪ್ತಿಯಲ್ಲಿ ಜೆಸ್ಕಾಂನಿಂದ ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರಣಬಸ್ಸಪ್ಪ ಪಾಟೀಲ್ ದೂರಿದ್ದಾರೆ.
ಕಳೆದ ಎರಡು ವಾರಗಳಿಂದ ಯಾವುದೇ ಮೂನ್ಸೂಚನೆ ನೀಡದೆ ಬೇಕಾ ಬಿಟ್ಟಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗುತ್ತಿದೆ. ಮೊದಲೆ ಮಳೆಯಾಗುತ್ತಿಲ್ಲ. ಹೀಗಿರುವಾಗ ವಿದ್ಯುತ್ ಇಲ್ಲದಿದ್ದರೆ ಬೆಳೆಗಳ ಸ್ಥಿತಿ ಏನು ? ಸಸಿಗಳು ಒಣಗಿ ಹೋಗುತ್ತಿವೆ, ಮೋಟಾರುಗಳು ಸುಡುತ್ತಿವೆ ಎಂದು ಕಿಡಿಕಾರಿದರು.