ದುರ್ಗದ 181 ಹಳ್ಳಿಗಳಲ್ಲಿ ಕುಡಿವ ನೀರಿಗೆ ಅಭಾವ?

mevu
Published on

ಚಿತ್ರದುರ್ಗ: ಬರಗಾಲ ಆವರಿಸಿರುವ ನಡುವೆ ಹಿಂಗಾರು ಮಳೆ ಕೂಡ ಕೈಕೊಟ್ಟರೆ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯ 181ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಂದಾಜಿಸಿದೆ.

ಈಗಾಗಲೇ ಗುರುತಿಸಲಾದ 58 ಗ್ರಾಮಗಳ ಜತೆಗೆ ಹಿಂದಿನ ಐದು ವರ್ಷಗಳಲ್ಲಿ ಎದುರಾದ ಬರ ಪರಿಸ್ಥಿತಿ ಅವಲೋಕಿಸಿ ಇನ್ನೂ 123 ಗ್ರಾಮಗಳನ್ನು ಹೊಸದಾಗಿ ಗುರುತಿಸಲಾಗಿದೆ.

ಬರ ನಿರ್ವಹಣೆಯ ತುರ್ತು ಕಾಮಗಾರಿಗಳಿಗೆ ಸರ್ಕಾರ ಈಗಾಗಲೇ ಚಿತ್ರದುರ್ಗ ಸೇರಿ ಎಲ್ಲ ಜಿಲ್ಲೆಗಳಿಗೆ ತಲಾ ಒಂದು ಕೋಟಿ ರೂ ಬಿಡುಗಡೆ ಮಾಡಿದೆ.

ಈ ಅನುದಾನ ಬಳಸಿಕೊಂಡು ಮೊದಲಿನ ಹಾಗೂ ಈಗ ಗುರುತಿಸಲಾದ ಗ್ರಾಮಗಳಲ್ಲಿ ಅಗತ್ಯತೆ ಆಧರಿಸಿ ಹೊಸ ಕೊಳವೆಬಾವಿ ಕೊರೆಸಲು (ಊಔಖಿಖಏಐಘೆಎ,ಈಉಉಉಐಘೆಎ) ಅಥವಾ ಬಾಡಿಗೆ ಪಡೆಯಲು, ಪೈಪ್‌ಲೈನ್ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಪಂ ಅನುಮೋದನೆಗೆ ಕಳುಹಿಸಲಾಗಿದೆ.

ಮೇವಿನ ಕಿಟ್‌ಗೆ 20 ಕೋಟಿ ರೂ.ಮಂಜೂರುಙ: ಬರ ಪೀಡಿತ ತಾಲೂಕುಗಳಲ್ಲಿ ಜಾನುವಾರಗಳಿಗೆ ಮೇವಿನ ಕೊರತೆ ಆಗದಂತೆ ಮೇವು ಬೆಳೆಯಲು ರೈತರಿಗೆ ಮೇವಿನ ಮಿನಿ ಕಿಟ್‌ಗಳನ್ನು ಉಚಿತವಾಗಿ ವಿತರಿಸಲು ಸರ್ಕಾರ 20 ಕೋಟಿ ರೂ. ಮಂಜೂರು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net