ಕಮಲ ಹಿಡಿದ ಕೈ ಕಾರ್ಯಕರ್ತರು

5MDG3
Published on

ಮುಂಡರಗಿ: ಪಟ್ಟಣದಲ್ಲಿ ಶಾಸಕ ರಾಮಣ್ಣ ಲಮಾಣಿ ಅವರ ಸಮ್ಮುಖದಲ್ಲಿ ತಾಲೂಕಿನ ಹಮ್ಮಿಗಿ ಗ್ರಾಮದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.

ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ‘ಕಾಂಗ್ರೆಸ್ ಕಾಯರ್ಕತರು ಬಿಜೆಪಿ ಸೇರಿದ್ದರಿಂದ ಪಕ್ಷದ ಬೆಳವಣಿಗೆಗೆ ಅನುಕೂಲವಾಗಲಿದೆ. ಮುಂಬರುವ ಗ್ರಾ.ಪಂ. ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು’ ಎಂದರು.

ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಮಾತನಾಡಿದರು. ಹಮ್ಮಿಗಿ ಗ್ರಾಮದ ತಾ.ಪಂ. ಮಾಜಿ ಸದಸ್ಯ ಚನ್ನವೀರಪ್ಪ ಎಲಿಗಾರ, ಹಾಲಪ್ಪ ಹರಿಜನ, ದಂಡೆಪ್ಪ ಗುಂಡಿಕೇರಿ, ನಾಗರಾಜ ಹರಿಜನ, ನೀಲಪ್ಪ ಹರಿಜನ, ವೀರಭದ್ರಪ್ಪ ಹೊಳೆಯಾಚೆ, ಮಲ್ಲಪ್ಪ ಸುಣಗಾರ ಇತರರು ಬಿಜೆಪಿ ಸೇರ್ಪಡೆಗೊಂಡರು.

ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ, ಕೆ.ವಿ. ಹಂಚಿನಾಳ, ಆನಂದಗೌಡ ಪಾಟೀಲ, ರಜನಿಕಾಂತ ದೇಸಾಯಿ, ಡಾ. ಕುಮಾರಸ್ವಾಮಿ ಹಿರೇಮಠ, ದೇವಪ್ಪ ಇಟಗಿ, ಬಸವರಾಜ ಬಿಳಿಮಗ್ಗದ, ಕೊಟ್ರೇಶ ಬಳ್ಳೊಳ್ಳಿ, ಶಿವನಗೌಡ ಗೌಡರ, ತಿಮ್ಮರೆಡ್ಡಿ ಮರಡ್ಡಿ, ಕೊಟ್ರೇಶ ಎಲಿಗಾರ, ಕೃಷ್ಣ ಗಡಾದ, ಮಹಾಂತೇಶ ಕೊರಡಕೇರಿ, ಮಾರುತಿ ನಾಗರಹಳ್ಳಿ, ವಿರೂಪಾಕ್ಷಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net