ಕಮಲ ಕಾರ್ಯಕರ್ತರಿಂದ ಅಂತ್ಯಸಂಸ್ಕಾರ

12121
Published on

ಖಾನಾಪುರ: ಸ್ಥಳೀಯ ಭಾರತೀಯ ಜನತಾ ಪಕ್ಷದ ಕೆಲ ಕಾರ್ಯಕರ್ತರು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಒಂದು ವಾರದಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟಿದ್ದ ತಾಲೂಕಿನ ಬೀಡಿ, ಶೇಡೆಗಾಳಿ ಗ್ರಾಮಗಳ ಮತ್ತು ಪಟ್ಟಣದ ನಿಂಗಾಪುರ ಗಲ್ಲಿಯ ವ್ಯಕ್ತಿ ಸೇರಿದಂತೆ ಒಟ್ಟು ಮೂವರ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮಾನುಸಾರ ನೆರವೇರಿಸಿದ್ದಾರೆ.

ಬಿಜೆಪಿ ಯುವ ಘಟಕದ ಮುಖಂಡ ಪಂಡಿತ ಓಗಲೆ ನೇತೃತ್ವದಲ್ಲಿ ಯುವ ಕಾರ್ಯಕರ್ತರಾದ ರಾಜ ಗಾವಡೆ, ಕಿರಣ ತುಡವೇಕರ, ರಘುನಾಥ ಗುರವ, ಮಾರುತಿ ಜಾಧವ ಇತರರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ಕೋವಿಡ್ ಸೋಂಕಿತರು ಮೃತಪಟ್ಟ ಮಾಹಿತಿ ಪಡೆಯುತ್ತಲೇ ಪಿಪಿಇ ಕಿಟ್ ಧರಿಸಿ ಮೃತದೇಹವನ್ನುಮುಕ್ತಿಧಾಮಕ್ಕೆ ಕರೆದೊಯ್ದು ಮೃತ ವ್ಯಕ್ತಿಯ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾರೆ. ಈ ಭಾಗದಲ್ಲಿ ಕರೊನಾ ಸೋಂಕಿನಿಂದ ಯಾರಾದರೂ ಮೃತಪಟ್ಟಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಮೊ: 7795149234 ಸಂಪರ್ಕಿಸಬಹುದು ಎಂದು ಪಂಡಿತ ಓಗಲೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net