ಕಮರವಾಡಿ ಬಸವ ಭವನಕ್ಕೆ ಅನುದಾನ ನೀಡಲು ಎಂಪಿ ಜಾಧವ್​ಗೆ ಮನವಿ

PH 05
Published on

ವಾಡಿ: ಸಮೀಪದ ಕಮರವಾಡಿ ಗ್ರಾಮದಲ್ಲಿ ಬಸವ ಭವನ ನಿರ್ಮಾಣ ಮಾಡಲು ಅನುದಾನ ನೀಡಲು ಲೋಕಸಭಾ ಸದಸ್ಯರಾದ ಡಾ. ಉಮೇಶ ಜಾಧವ ಅವರಿಗೆ ಶರಣಬಸವೇಶ್ವರ ದೇವಸ್ಥಾನ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.

ಕಲಬುರಗಿಯ ಅವರ ನಿವಾಸದಲ್ಲಿ ಗುರುವಾರ ಭೇಟಿಯಾದ ಅವರು, ಇಲ್ಲಿ ಬಸವ ಭವನ ಮಾಡುವುದರಿಂದ ಕಮರವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೂಲಹಳ್ಳಿ, ಆಲೂರ, ಬೊಮ್ಮನಹಳ್ಳಿ ಗ್ರಾಮಗಳು, ಮೂಳಿ ತಾಂಡ, ದೇವಪುರ ತಾಂಡ ಹಾಗೂ ರಾಮನಗರ ತಾಂಡಗಳ ನಿವಾಸಿಗಳಿಗೆ ಅನುಕೂಲ ವಾಗಲಿದೆ ಎಂದು ಸಂಸದರಿಗೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಅಣ್ಣಾರಾವ ಗೌಡ ಪಾಟೀಲ, ದೇವೇಂದ್ರಪ್ಪ ಗೌಡ ಪಾಟೀಲ, ಗುರುಬಸಪ್ಪ ಯರ್ಗಲ, ವೀರಣ್ಣ ಯಾರಿ, ಸಿದ್ರಾಮ ಕರದಳ್ಳಿ, ಭೀಮಾಶಂಕರ ಇಂದೂರ, ಬಸವರಾಜ ಸುಲೇಪೆಟ, ಬಾಪುರಾವ ಕಾಶೆಟ್ಟಿ, ಶರಣು ಕುಸನೂರ ಸೇರಿದಂತೆ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net