

ಚಾಮರಾಜನಗರ: ಕಾರ್ಖಾನೆಗಳಿಗೆ ನೋಂದಣಿ ಮಾಡಿರದ ರೈತರು ತಮಗೆ ಬೆಂಬಲ ಬೆಲೆ ದೊರಕುವ ಕಾರ್ಖಾನೆಗಳಿಗೆ ಕಬ್ಬು ಕಟಾವು ಮಾಡಿಸಲು ಮುಕ್ತ ಅವಕಾಶವನ್ನು ನೀಡಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಮಂಗಳವಾರ ಸಲ್ಲಿಸಲಾಯಿತು.ಜಿಲ್ಲೆಯಲ್ಲಿ ವ್ಯವಸಾಯ ಹೆಚ್ಚಾಗಿ ತರಕಾರಿಗಳನ್ನು ಬೆಳೆಯುವುದು ಹಾಗೂ ವ್ಯವಸಾಯ ಮಾಡುವುದು ಹೆಚ್ಚಾಗುತ್ತಿದೆ. ಈ ಭಾಗದಿಂದ ತಮಿಳುನಾಡು ಮತ್ತು ಕೇರಳಾ ರಾಜ್ಯಗಳಿಗೆ ಹೆಚ್ಚಾಗಿ ರ್ತುಕೂಡ ಆಗುತ್ತಿದೆ. ಕಬ್ಬು ಬೆಳೆಯುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಹೆಚ್ಚಿನ ಕಬ್ಬು ಬೆಳೆಗಾರರು ಕಾರ್ಖಾನೆಗಳಿಗೆ ನೋಂದಣಿ ಮಾಡಿಕೊಂಡಿರುತ್ತಾರೆ. ಇನ್ನೂ ಕೆಲವರು ನೋಂದಣಿ ಮಾಡಿರುವುದಿಲ್ಲ. ಆದ್ದರಿಂದ ನೋಂದಣಿ ಮಾಡಿರದ ರೈತರು ತಮಗೆ ಬೆಂಬಲ ಬೆಲೆ ದೊರಕುವ ಕಾರ್ಖಾನೆಗಳಿಗೆ ಕಬ್ಬು ಕಟಾವು ಮಾಡಿಸುವುದು ಮುಕ್ತವಾಗಬೇಕಿದೆ ಎಂದು ಒತ್ತಾಯಿಸಿದರು.
ಚಾಮರಾಜನಗರ ತಾಲೂಕಿನ ಹಲವು ಕಬ್ಬು ಬೆಳೆಗಾರ ರೈತರು ತಾವು ಬೆಳೆದ ಕಬ್ಬುಗಳನ್ನು ತಮಿಳುನಾಡಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ತಕ್ಕ ಬೆಂಬಲ ಬೆಲೆ ದೊರೆಯುತ್ತಿದೆ. ರಾಜ್ಯದ ಕಾರ್ಖಾನೆಗಳಿಗೆ ನೋಂದಣಿ ಮಾಡಿಲ್ಲದವರ ರೈತರಿಗೆ ಮುಕ್ತ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಈ ಭಾಗದ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಗೋವಿಂದರಾಜು, ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ರುದ್ರೇಶ್ ಗುಂಡಣ್ಣ, ಖಜಾಂಚಿ ಕೆ.ಮಹೇಶ್, ಸಂಘಟನಾ ಕಾರ್ಯದರ್ಶಿ ಪಿ.ಮೂರ್ತಿ, ಮಂಡೆ ಮಹದೇವಯ್ಯ, ರಾಜೇಂದ್ರ, ಸಿ.ಶಿವಬಸವಣ್ಣ, ಎಸ್.ಆರ್.ಗೋವಿಂದರಾಜು, ಮಾಧು ಸಿದ್ದಯ್ಯನಪುರ , ಮಂಜು, ಕುಂಭೇಶ್ವರ ಸ್ವಾಮಿ, ನಂಜುಂಡಯ್ಯ, ಚಂದ್ರಶೇಖರ್ ಹಾಗೂ ಇತರರು ಹಾಜರಿದ್ದರು.