ಕಬ್ಬು ಬೆಳೆಗಾರರ ಸಮಸ್ಯೆ ನೀಗಿಸಿ

23-9
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಿಂದ ಹೂಲಿ ರಾಜ್ಯ ಹೆದ್ದಾರಿ-30ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಕಾಮಗಾರಿಗೆ ಮಾಜಿ ಎಪಿಎಂಸಿ ಅಧ್ಯಕ್ಷ ವಿರೂಪಾಕ್ಷಿ ಹನಸಿ ಭೂಮಿ ಪೂಜೆ ಸಲ್ಲಿಸಿದರು. ಜಗದೀಶ ಕೌಜಗೇರಿ, ವೈ.ವೈ. ಕಾಳಪ್ಪನವರ, ಎಚ್.ಕೆ. ಕದ್ರಾಪೂರಕರ್, ಪರಸಪ್ಪ ಇಮಾರಾಪುರ ಇತರರಿದ್ದರು.
Published on

ಸವದತ್ತಿ, ಬೆಳಗಾವಿ: ಲೋಕೋಪಯೋಗಿ ಇಲಾಖೆಯ 2 ಕೋಟಿ ರೂ. ಅನುದಾನದಲ್ಲಿ ತಾಲೂಕಿನ ಉಗರಗೋಳ ಗ್ರಾಮದಿಂದ ಹೂಲಿ ರಾಜ್ಯ ಹೆದ್ದಾರಿ-30ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಕಾಮಗಾರಿಗೆ ಬುಧವಾರ ಮಾಜಿ ಎಪಿಎಂಸಿ ಅಧ್ಯಕ್ಷ ವಿರೂಪಾಕ್ಷಿ ಹನಸಿ ಭೂಮಿ ಪೂಜೆ ನೆರವೇರಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆ ಅರಿತು ರಸ್ತೆ ಸೇತುವೆ ಕಾಮಗಾರಿ ಆರಂಭಿಸಬೇಕು. ಶಾಸಕ ಆನಂದ ಮಾಮನಿ ಅವರ ಅನುಪಸ್ಥಿತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಿಲ್ಲಬಾರದು ಎಂಬ ಅವರ ಆಶಯದಂತೆ ನಾವು ಕಾಮಗಾರಿಗೆ ಭೂಮಿಪುಜೆ ಸಲ್ಲಿಸಿದ್ದೇವೆ. ಆರೋಗ್ಯ ಸುಧಾರಿಸಿದ ಬಳಿಕ ಅವರು ಕಾಮಗಾರಿ ಉದ್ಘಾಟಿಸಲಿದ್ದಾರೆ ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ವಿರೂಪಾಕ್ಷಿ ಹನಸಿ ಹೇಳಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಕೌಜಗೇರಿ ಮಾತನಾಡಿ ಶಾಸಕರ ಆರೋಗ್ಯ ಸುಧಾರಿಸಿದ ಬಳಿಕ ತಾಲೂಕಿನಲ್ಲಿ ತಲಾ 20 ಲಕ್ಷ ರೂ. ಅನುದಾನದ 11 ವಾಲ್ಮೀಕಿ ಭವನಗಳು ಮಂಜೂರಾಗಿವೆ ಎಂದರು. ಯಲ್ಲಮ್ಮ ವ್ಯವಸ್ಥಾಪನಾ ಸಮಿತಿ ಸದಸ್ಯ ವೈ.ವೈ. ಕಾಳಪ್ಪನವರ ಮಾತನಾಡಿದರು.

ಪಿಡಬ್ಲೂೃಡಿ ಅಧಿಕಾರಿ ಎಚ್.ಕೆ. ಕದ್ರಾಪೂರಕರ್, ಪರಸಪ್ಪ ಇಮಾರಾಪೂರ, ರಾಜೇಸಾಬ್ ಬಾರೀಗಿಡದ, ಪಿಡಿಒ ಮಹೇಶ ತೆಲಗಾರ, ವಿಠ್ಠಲ ಸಿದ್ದಕ್ಕನವರ, ಬಸಪ್ಪ ಸಿದ್ದಕ್ಕನವರ, ಉಗರಗೋಳ ಮತ್ತು ಹೂಲಿ ಪಂಚಾಯತಿ ಸದಸ್ಯರು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net