ಕಬ್ಬು ಬೆಳೆಗಾರರ ರೈತ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Oplus_16908288
Oplus_16908288
Published on

ನಂಜನಗೂಡು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯಾಲಯದ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ರಾಜ್ಯ ಘಟಕದ ಅಧ್ಯಕ್ಷ ಹಾಡ್ಯ ರವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೈಸೂರು ಜಿಲ್ಲೆ ಅಧ್ಯಕ್ಷರಾಗಿ ಮುದ್ದಹಳ್ಳಿ ಚಿಕ್ಕಸ್ವಾಮಿ, ಗೌರವಾಧ್ಯಕ್ಷರಾಗಿ ಬನ್ನೂರು ಎಂ.ವಿ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ದೇವಿರಮ್ಮನಹಳ್ಳಿ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾಗಿ ಕೊಂತಯ್ಯನಹುಂಡಿ ಜೆ.ಮಹೇಶ್, ಜಿಲ್ಲಾ ಪತ್ರಿಕಾ ಕಾರ್ಯದರ್ಶಿಯಾಗಿ ದೇವಿರಮ್ಮನ ಹುಂಡಿ ಮಹೇಶ್, ಜಿಲ್ಲಾ ಕಾರ್ಯದರ್ಶಿ ಭುಜಂಗಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನಂದಗುಂದಪುರ ಸೋಮಣ್ಣ, ತಾಲೂಕು ಅಧ್ಯಕ್ಷರಾಗಿ ಅಂಬಳೆ ಮಹದೇವಸ್ವಾಮಿ, ಗೌರವಾಧ್ಯಕ್ಷರಾಗಿ ಶಿವಕುಮಾರ್, ಉಪಾಧ್ಯಕ್ಷರಾಗಿ ಹಂಡುವಿನಹಳ್ಳಿ ರವಿ, ಪ್ರಧಾನ ಕಾರ್ಯದರ್ಶಿಯಾಗಿ ತಗಡೂರು ನಾಗೇಶ್, ಸಂಘಟನಾ ಕಾರ್ಯದರ್ಶಿಯಾಗಿ ಹಂಡುವಿನಹಳ್ಳಿ ಸಿದ್ದರಾಜು, ಸಂಚಾಲಕರಾಗಿ ಗುರುಸ್ವಾಮಿ, ಕಾರ್ಯದರ್ಶಿಯಾಗಿ ನಂಜನಹಳ್ಳಿ ಮೂರ್ತಿ, ತಾಲೂಕು ಉಪಾಧ್ಯಕ್ಷರಾಗಿ ಮಲ್ಲೇಶ್, ಖಚಾಂಚಿಯಾಗಿ ಕುಮಾರಸ್ವಾಮಿ, ಚಾಮರಾಜನಗರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಶೋಭಾ, ಮೈಸೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಕೊಂತಯ್ಯನಹುಂಡಿ ರಾಣಿ, ನಂಜನಗೂಡು ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ತಾಯಿ ಮುತ್ತಮ್ಮ ಅವರನ್ನು ಆಯ್ಕೆ ಮಾಡಲಾಯಿತು.

ರಾಜ್ಯ ಗೌರವಾಧ್ಯಕ್ಷ ದೇವೀರಮ್ಮನಹಳ್ಳಿ ನಂದೀಶ್, ಕಸುವಿನಹಳ್ಳಿ ಮಂಜೇಶ್ ಕುಮಾರ್, ಅತ್ತಹಳ್ಳಿ ಸ್ವಾಮಿರಾಜು, ಹಂಡುವಿನಹಳ್ಳಿ ಮರಿಸ್ವಾಮಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net