ಕಬ್ಬು ಬೆಳೆ ಬೆಂಕಿಗಾಹುತಿ

2222222
Published on

ಧಾರವಾಡ: ಆಕಸ್ಮಿಕ ಬೆಂಕಿ ತಗುಲಿ ಕಬ್ಬು ಬೆಳೆ ಆಹುತಿಯಾದ ಘಟನೆ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ರೈತ ಚನ್ನಬಸಪ್ಪ ಗಂಟಿ ಎಂಬುವರ ಸುಮಾರು 4 ಎಕರೆ ಕಬ್ಬು ಬೆಳೆ ಸುಟ್ಟಿದೆ. ಮಧ್ಯಾಹ್ನ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದನ್ನು ನೋಡಿದ ಅಕ್ಕಪಕ್ಕದ ರೈತರು ಬೆಂಕಿ ನಂದಿಸಲು ಯತ್ನಿಸಿದರು. ಕಬ್ಬು ಒಣಗಿದ್ದರಿಂದ ಬೆಂಕಿ ಹತೋಟಿಗೆ ಬಾರದೆ ಗದ್ದೆ ತುಂಬ ವಿಸ್ತರಿಸಿತು. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net