ಕಬ್ಬಿನಹಳ್ಳಿ ಜಗದೀಶ್ ಬಣದ 11 ಅಭ್ಯರ್ಥಿಗಳು ಆಯ್ಕೆ

IMG-20250223-WA0239
Published on

ಆಲೂರು: ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 11 ಜನರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 33 ಜನ ನಾಮಪತ್ರಗಳನ್ನು ಸಲ್ಲಿಸಿದ್ದರು. ಅಂತಿಮವಾಗಿ ಹಾಸನ ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಅವರ ಬಣದ 11 ಅಭ್ಯರ್ಥಿಗಳು ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡರು.

ಎಚ್.ಎಂ.. ಕುಮಾರ್, ಸಿ.ಇ. ಯಶ್ವಂತ್ ಕುಮಾರ್, ಎಂ.ಎಂ. ದಿಲೀಪ್, ಎಸ್.ಕೆ. ಮಹೇಶ್, ಆರ್.ಎಸ್. ನಟರಾಜ್, ವಿ.ಡಿ. ಇಂದಿರಾ, ಎಚ್.ಬಿ. ರತ್ನಾ, ಎಂ.ಪಿ. ರೇವೇಗೌಡ, ಕೆ.ಎಂ. ಪಾಲಾಕ್ಷ, ಎಂ.ಎನ್. ಯುವರಾಜ್ ನಿರ್ದೇಶಕರಾಗಿ ಆಯ್ಕೆಗೊಂಡರೆ, ಸಾಲಗಾರರಲ್ಲದ ಕ್ಷೇತ್ರದಿಂದ ದರ್ಶನ ಕೆರೆಹಳ್ಳಿ ಆಯ್ಕೆಯಾದರು. ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ಯಾರೂ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಸ್ಥಾನ ಖಾಲಿಯಿದೆ. ಚುನಾವಣಾಧಿಕಾರಿಯಾಗಿ ಶಿಕ್ಷಣ ಇಲಾಖೆಯ ಗಿರೀಶ್ ಕರ್ತವ್ಯ ನಿರ್ವಹಿಸಿದರು.

ಬೆಳೆಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಶಶಿಕಲಾ, ಮಾಜಿ ನಿರ್ದೇಶಕರಾದ ಶಾಂತರಾಜು, ಎಚ್.ಬಿ ಆನಂದ್, ಕೆ.ಪಿ ಬಸವರಾಜ್, ಎಂ.ವಿ ಬಸವರಾಜ್, ಸಿಬ್ಬಂದಿ ಕುಮಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net