

ವಿಜಯವಾಣಿ ಸುದ್ದಿಜಾಲ ಹನೂರು
ಪಟ್ಟಣದಿಂದ ಮಲೆ ಮಹದೇಶ್ವರಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಫಸಲು ಬೆಂಕಿಗಾಹುತಿಯಾಗಿದೆ.
ಪಟ್ಟಣ ನಿವಾಸಿ ಕೇಶವಮೂರ್ತಿ ಎಂಬವರು 2.5 ಎಕರೆಯಲ್ಲಿ ಕಬ್ಬಿನ ಫಸಲು ಬೆಳೆದಿದ್ದು, ಕಟಾವಿನ ಹಂತಕ್ಕೆ ಬಂದಿತ್ತು. ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ಬೆಂಕಿಯು ತೆಂಗಿನ ಮರದ ಗರಿಗೆ ತಗುಲಿ ಜಮೀನಿಗೆ ಬಿದ್ದಿದೆ. ಬಳಿಕ ಕೇಶವಮೂರ್ತಿ ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಮೂಲಕ ಮುಂದಾಗುವ ಅನಾಹುತ ತಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಪ್ರಶಾಂತ್‌ನಾಯಕ್, ಸಿಬ್ಬಂದಿಗಳಾದ ಕೆ.ರವಿ, ಕಾರ್ತಿಕ್, ಮುನಿಶಾಂತ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಭಾಗವಹಿಸಿದ್ದರು.
ಫೋಟೋ
24 ಹನೂರು 2
ಹನೂರಿನಲ್ಲಿ ಕಬ್ಬಿನ ಫಸಲು ಬೆಂಕಿಗೆ ಆಹುತಿಯಾಗಿರುವುದು.