ಕಬ್ಬಿನ ಗದ್ದೆಯಲ್ಲಿತ್ತು ಹೆಬ್ಬಾವು!

Screenshot_20220721-1758542.png
Published on

ಯಲ್ಲಾಪುರ(ಉತ್ತರ ಕನ್ನಡ)ತಾಲೂಕಿನ ಮದನೂರು ಗ್ರಾ.ಪಂ ವ್ಯಾಪ್ತಿಯ ಹುಲಗೋಡಿನಲ್ಲಿ ಕಬ್ಬಿನಗದ್ದೆಗೆ ಬಂದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಡಲಾಯಿತು.

 ಹುಲಗೋಡಿನ ರಘುವೀರ ಗಜಾನನ ಮರಾಠಿ ಅವರ ಕಬ್ಬಿನಗದ್ದೆಗೆ ಸುಮಾರು ಎಂಟು ಅಡಿಯ ಹೆಬ್ಬಾವು ಬಂದು ಆತಂಕ ಮೂಡಿಸಿತ್ತು. ನಂತರ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಅಕ್ಬರ್ ಅಲಿ  ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ನಂತರ ಕಾಡಿಗೆ ಬಿಟ್ಟರು.

ಅರಣ್ಯ ರಕ್ಷಕ ಚನ್ನಬಸಪ್ಪ ಹೊಸಮನಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net