ಯಳಂದೂರು: ಸಮೀಪದ ಹೆಗ್ಗವಾಡಿಪುರ ಗ್ರಾಮದಲ್ಲಿ ಗುರುವಾರ ರಾತ್ರಿ ವಿದ್ಯುತ್‌ನಿಂದ ಬೆಂಕಿ ಹೊತ್ತಿಕೊಂಡು ಕಟಾವಿಗೆ ಬಂದಿದ್ದ ಮೂರೂವರೆ ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ.
ಕಾವುದವಾಡಿ ಗ್ರಾಮದ ನಿವಾಸಿ ಮಂಜುನಾಥ ಎಂಬುವರಿಗೆ ಸೇರಿದ ಸರ್ವೇ 140/01ರಲ್ಲಿ 3 ಎಕರೆ 18 ಗುಂಟೆ ಜಮೀನಿದ್ದು ಇದರಲ್ಲಿ ಕಬ್ಬು ಬೆಳೆದಿದ್ದರು. ಜಮೀನಿನಲ್ಲೇ ವಿದ್ಯುತ್ ತಂತಿ ಹಾದು ಹೋಗಿದ್ದು ಗಾಳಿಗೆ ವಿದ್ಯುತ್ ತಂತಿಗಳು ಘರ್ಷಿಸಿ ಕಿಡಿ ಬಂದಿದ್ದರಿಂದ ಒಣಗಿದ್ದ ಕಬ್ಬಿನ ಸೋಗಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಿಂದಿಸಲು ಯತ್ನಿಸಿದರೂ ಅಷ್ಟೊತ್ತಿಗಾಗಲೇ ಇಡೀ ಕಬ್ಬು ಸುಟ್ಟು ಭಸ್ಮವಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.