ಕಬಡ್ಡಿಯಲ್ಲಿ ಸೋಸಲಗೆರೆ ತಂಡ ಪ್ರಥಮ

02 CRP 01
Published on

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದ್ವಾರಗೋಪರದ ಉದ್ಘಾಟನಾ ಪ್ರಯುಕ್ತ ಶನಿವಾರ ನಡೆದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಸೊಸಲಗೆರೆ ತಂಡ ಪ್ರಥಮ ಸ್ಥಾನ ಗಳಿಸಿತು.

ಶುಕ್ರವಾರ ಹಾಗೂ ಶನಿವಾರ ಎರಡು ದಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಸಿವೈಸಿ ಯುವಕರ ಬಳಗದ ವತಿಯಿಂದ ಏರ್ಪಡಿಸಲಾಗಿತ್ತು. ತಾಲೂಕು ವ್ಯಾಪ್ತಿಯ ಹಾಗೂ ವಿವಿಧ ಜಿಲ್ಲೆಗಳಿಂದ 20 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಅಂತಿಮ ಪಂದ್ಯದಲ್ಲಿ ನುಗ್ಗೇಹಳ್ಳಿ ಹೋಬಳಿಯ ಸೋಸಲಗೆರೆ ತಂಡವು ಹಿರೀಸಾವೆ ತಂಡದ ವಿರುದ್ಧ ಜಯಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಹಿರೀಸಾವೆ ತಂಡವು ದ್ವಿತೀಯ, ಬೆಂಗಳೂರು ತಂಡ ತೃತೀಯ ಮತ್ತು ತುಮಕೂರು ತಂಡ ಚತುರ್ಥ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿಗಳನ್ನು ನೀಡಿ ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net