ಕಬಡ್ಡಿಯಲ್ಲಿ ವಿಭಾಗ ಮಟ್ಟಕ್ಕೆ ವಸತಿ ಶಾಲೆ ಮಕ್ಕಳು

ydg02
Published on

ಕೊಡೇಕಲ್: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಗುರುತಿಸಿಕೊಂಡಿರುವ ರಾಜನಕೋಳೂರ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ಆಂಗ್ಲ ಮಾಧ್ಯಮ ವಸತಿ ಶಾಲೆಯ ಬಾಲಕಿಯರು ಇದೀಗ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಸತಿ ಶಾಲೆಯ ವಿದ್ಯಾರ್ಥಿನಿ ಜಯಶ್ರೀ ನಾಯಕತ್ವದಲ್ಲಿ ದೈಹಿಕ ಶಿಕ್ಷಕ ಮೌನೇಶ ತಳ್ಳಳ್ಳಿ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿಯರಾದ ರಂಜಿತ, ವಿದ್ಯಾಶ್ರೀ, ಮಾನಮ್ಮ, ಮಂಜುಳಾ, ಸಾವಿತ್ರಿ, ಅನ್ನಪೂರ್ಣ, ಐಶ್ವರ್ಯ, ಲಕ್ಷ್ಮೀ ಮತ್ತು ಶ್ರುತಿ ವಲಯ ಮಟ್ಟದ ಕ್ರೀಡಾಕೂಟದಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟದವರೆಗೆ ಪ್ರತಿಯೊಂದು ಪಂದ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ, ಈಗ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸೆ. ೮ಮತ್ತು ೯ ರಂದು ಬೀದರನಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.


ಈ ಹಿಂದೆ ರಾಜ್ಯ ಮಟ್ಟಕ್ಕೆ ಒಂದು ಬಾರಿ ಮತ್ತು ವಿಭಾಗ ಮಟ್ಟಕ್ಕೆ ನಾಲ್ಕು ಬಾರಿ ಈ ವಸತಿ ಶಾಲಾ ಮಕ್ಕಳು ಆಯ್ಕೆಯಾಗಿರುವುದು ವಿಶೇಷವಾಗಿದೆ. ಈ ಮಕ್ಕಳ ಸಾಧನೆಗೆ ಮಾಜಿ ಸಚಿವ ನರಸಿಂಹನಾಯಕ, ಎಚ್.ಸಿ.ಪಾಟೀಲ್, ಪ್ರಭುಗೌಡ ಪಾಟೀಲ್, ಬಸನಗೌಡ ಅಳ್ಳಿಕೋಟಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಪ್ಪ ಅಣಬಿ, ಪ್ರಾಚರ‍್ಯ ಮಾನಪ್ಪ ಸತ್ಯ ಸೇರಿ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net