ಕಬಡ್ಡಿಯಲ್ಲಿ ಕೆಎಲ್​ಇ ಐಟಿ ರನ್ನರ್ಸ್ ಅಪ್

kle it kabbaddi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಬೆಳಗಾವಿ ವಿಭಾಗ ಮಟ್ಟದ ಅಂತರ್ ಕಾಲೇಜ್ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಕೆಎಲ್​ಇ ಸಂಸ್ಥೆಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆದಿದೆ.

ಚಿಕ್ಕೋಡಿಯ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಇತ್ತೀಚೆಗೆ ಪಂದ್ಯಾವಳಿ ಆಯೋಜಿಸಲಾಗಿತ್ತು. ಜ್ಯೋತಿ ಜಾಧವ, ಅರ್ಚನಾ ಗುಡಗೇರಿ, ರೋಶನಿ ಅಕ್ಕುರ್ಥಿ, ಲಕ್ಷ್ಮೀ ಮುರಗುಂಡಿ, ಗಂಗಮ್ಮ ಭಜಂತ್ರಿ, ಮಿಲನಾ ಕೆ., ಭಾಗ್ಯಶ್ರೀ, ಸಂಭಾವಿ ಹೊಂಗಲ್, ನಿಶಾ ಜಾಧವ, ಚಂದ್ರಿಕಾ ಕರಮುದಿ (ನಾಯಕಿ) ತಂಡವನ್ನು ಪ್ರತಿನಿಧಿಸಿದ್ದರು.

ಈ ಸಾಧನೆಯೊಂದಿಗೆ ಕೆಎಲ್​ಇ ಸಂಸ್ಥೆಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೇ 16 ಮತ್ತು 17ರಂದು ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿರುವ ವಿಟಿಯು ರಾಜ್ಯ ಮಟ್ಟದ ಕಬಡ್ಡಿ ಟೂರ್ನಮೆಂಟ್​ಗೆ ಅರ್ಹತೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net