ಕಬಡ್ಡಿ ಪಟು ಅಭಿಷೇಕ್‌ಗೆ ಅಭಿನಂದನೆ

18-pnp 3
ವಿವೋ ಪ್ರೋ ಕಬಡ್ಡಿ-ಸೀಸನ್ 9ರಲ್ಲಿ ಜೈಪುರ ಪಿಂಕ್‌ಪ್ಯಾಂಥರ್ಸ್‌ ಪರವಾಗಿ ಉತ್ತಮ ಆಟವಾಡಿ ಫೈನಲ್ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾದ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ಕೆ.ಎಸ್.ಅಭಿಷೇಕ್ ಅವರನ್ನು ಗ್ರಾಮದ ಕ್ರೀಡ್ರಾಭಿಮಾನಿಗಳು ಅಭಿನಂದಿಸಿದರು.
Published on

ಪಾಂಡವಪುರ: ವಿವೋ ಪ್ರೋ ಕಬಡ್ಡಿ-ಸೀಸನ್ 9ರಲ್ಲಿ ಜೈಪುರ ಪಿಂಕ್‌ಪ್ಯಾಂಥರ್ಸ್‌ ಪರವಾಗಿ ಉತ್ತಮ ಆಟವಾಡಿ ಫೈನಲ್ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾದ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಕೆ.ಎಸ್. ಅಭಿಷೇಕ್ ಅವರಿಗೆ ತಾಲೂಕಿನ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಪುಣೇರಿ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್‌ ಪೈನಲ್ ಪಂದ್ಯಾವಳಿಯಲ್ಲಿ ಎಡ ಮೂರನೇ ಆಟಗಾರನಾಗಿ ಅತ್ಯುತ್ತಮ ಪ್ರದರ್ಶನ ನೀಡಿ ಐದು ಕ್ಯಾಚ್‌ಗಳನ್ನು ಹಿಡಿದು ತಂಡದ ಗೆಲುವಿಗೆ ಮಹತ್ತರ ಕಾಣಿಕೆ ನೀಡಿದ ಅಭಿಷೇಕ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು. ಇವರ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಕ್ಯಾತನಹಳ್ಳಿಯ ನಾಗೇಶ್ ಮತ್ತು ಪ್ರೇಮಾ (ಸುವರ್ಣ) ದಂಪತಿ ಪುತ್ರರಾದ ಅಭಿಷೇಕ್ ಮೂಡಬಿದರೆ ಎಸ್‌ಡಿಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಕಬಡ್ಡಿ ಬಗ್ಗೆ ಆಸಕ್ತಿ ಹೊಂದಿದ್ದ ಇವರು ನಿರಂತರ ಅಭ್ಯಾಸ ಮತ್ತು ಶ್ರಮದಿಂದ 9ನೇ ಅವೃತ್ತಿ ಪ್ರೋ ಕಬಡ್ಡಿಗೆ ಆಯ್ಕೆಯಾಗಿ ಕಬಡ್ಡಿ ಆಟದಲ್ಲಿ ಸಾಧನೆ ಮಾಡಿದ್ದಾರೆ. ಜೈಪುರ ಪಿಂಕ್‌ಪ್ಯಾಂಥರ್ಸ್‌ ಮಾಲೀಕರು 6 ಲಕ್ಷ ರೂ.ಗಳಿಗೆ ಅಭಿಷೇಕ್ ಅವರನ್ನು ಖರೀದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net