ಕಬಡ್ಡಿ ಪಂದ್ಯಾವಳಿಯಲ್ಲಿ ಅಣ್ಣೇಚಾಕನಹಳ್ಳಿ ಶಾಲೆ ಪ್ರಥಮ

04 krp 02
Published on

ಕೆ.ಆರ್.ಪೇಟೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಅಣ್ಣೇಚಾಕನಹಳ್ಳಿ ಶಾಲೆ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯಿಂದ ಅಭಿನಂದಿಸಲಾಯಿತು.


ಸಮಿತಿ ಅಧ್ಯಕ್ಷ ಅಶೋಕ್ ಮಾತನಾಡಿ, 1 ತಿಂಗಳಿನಿಂದಲೂ ಶಿಕ್ಷಕರು ಪಾಠದ ಜತೆಗೆ ಪ್ರತಿಭಾ ಕಾರಂಜಿ, ಕ್ರೀಡಾಕೂಟ ಮುಂತಾದವುಗಳಿಗೆ ಮಕ್ಕಳನ್ನು ಸಿದ್ಧಪಡಿಸಿ ಪ್ರತಿಭೆಗಳನ್ನು ಓರೆಗೆ ಹಚ್ಚುವ ಕೆಲಸ ಮಾಡಿದರ ಫಲವಾಗಿ ತಾಲೂಕಿಗೆ ಕಬಡ್ಡಿ ಆಟದಲ್ಲಿ ಮಕ್ಕಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಹಂತದಲ್ಲಿಯೂ ಬಹುಮಾನ ಪಡೆಯುವಂತಾಗಲಿ ಎಂದು ಶುಭ ಕೋರಿದರು.


ಹಿರಿಕಳಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಂತರಾಜು, ಸದಸ್ಯ ಎ.ಬಿ.ನಾಗರಾಜು, ಎಸ್‌ಡಿಎಂಸಿ ಸದಸ್ಯ ಯೋಗೇಶ್, ಮುಖ್ಯ ಶಿಕ್ಷಕ ಎಚ್.ಜಿ.ಅನಂತ್, ಶಿಕ್ಷಕರಾದ ಪ್ರಕಾಶ್, ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net