ಕಬಡ್ಡಿ ಪಂದ್ಯಾವಳಿಗೆ ಚಾಲನೆ

Kabbaddi
Published on

ಹೂವಿನಹಿಪ್ಪರಗಿ: ಮೊಬೈಲ್, ಕಂಪ್ಯೂಟರ್ ಅತಿಯಾದ ಬಳಕೆಯಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಒದಗಿಸುವ ದೇಶಿಯ ಕ್ರೀಡೆಗಳನ್ನು ಆಡುವುದು ಕಣ್ಮರೆಯಾಗುತ್ತಿದೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರ ಸಹೋದರ ಬಿಜೆಪಿ ಮುಖಂಡ ಸಾಹೇಬಗೌಡ ಪಾಟೀಲ ಹೇಳಿದರು. ಸಮೀಪದ ಬ್ಯಾಲಾಳ ಗ್ರಾಮದಲ್ಲಿ ಅಕ್ಕಮಹಾದೇವಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಗಳು ನಮ್ಮಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯವನ್ನು ಕಾಪಾಡಿಕೂಂಡು ಬರಲು ಸಹಕಾರಿಯಾಗಿದೆ. ಯುವ ಸಂಘಟನೆ ಉತ್ತಮ ಉದ್ದೇಶಗಳನ್ನು ಇಟ್ಟುಕೊಂಡು ಸಮಾಜಮುಖಿ ಕೆಲಸ ಮಾಡಿದರೆ ನಮ್ಮ ಸಮಾಜ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಮೋಹನಗೌಡ ಹಿರೇಗೌಡರ, ರಾಮನಗೌಡ ನಾವದಗಿ, ಅವಣ್ಣ ಗ್ವಾತಗಿ, ಶ್ರೀಶೈಲ ಮುತ್ಯಾಗೌಡರ, ಬಸವರಾಜ ಶೇಷಗೇರಿ, ಸಂಗು ಗ್ವಾತಗಿ, ಸುರೇಶ ಬಡಿಗೇರ, ಮಲ್ಲಿಕಾರ್ಜುನ ನಾಗರಾಳ, ಸುನೀಲ ಪೂಜಾರಿ, ಮಾಮಲ್ಲಪಗೌಡ ಗೌಡರ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net