ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಚಾಲಕ ಸಾವು

Published on

ಕಂಪ್ಲಿ: ಪಟ್ಟಣದ ದೇವಸಮುದ್ರ ಕ್ರಾಸ್ ಬಳಿ ಮಂಗಳವಾರ ಜಮೀನಿನಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದ ಬೈಕ್ ಸವಾರರ ಪೈಕಿ ಒಬ್ಬ ಮೃತಪಟ್ಟಿದ್ದಾರೆ. ಜವುಕು ಗ್ರಾಮದ ವಿ.ಗಣೇಶ್ ಮೃತ. ವಿ.ಗಣೇಶ್ ಬೈಕ್ ಚಲಾಯಿಸುತ್ತಿದ್ದು, ಹನುಮಂತರೆಡ್ಡಿ ಹಿಂಬದಿ ಕುಳಿತಿದ್ದರು. ಅಪಘಾತದ ಬಳಿಕ ಇಬ್ಬರನ್ನೂ ಬಳ್ಳಾರಿಯ ಟ್ರಾಮಾಕೇರ್‌ಗೆ ದಾಖಲಿಸಲಾಗಿತ್ತು. ಅತಿ ವೇಗ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಪಟ್ಟಣದ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net