ಕನ್ಹೇರಿ ಮಠದ ಔಷಧ ಸಂಜೀವಿನಿ

13-444
ಚಚಡಿ ಗ್ರಾಮದಲ್ಲಿ ಜಾನುವಾರುಗಳಿಗೆ ಔಷಧ ವಿತರಣೆ ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಮಾತನಾಡಿದರು. ಬಸನಗೌಡ ಪಾಟೀಲ, ಯಲ್ಲಪ್ಪ ಮೇಟಿ, ಬಸಯ್ಯ ಪೂಜೇರಿ, ನಿಂಗಪ್ಪ ಪಾಟೀಲ ಇತರರು ಇದ್ದರು.
Published on

ಬೈಲಹೊಂಗಲ ಬೆಳಗಾವಿ: ಕನ್ಹೇರಿ ಮಠದ ಔಷಧವು ಜಾನುವಾರು ಚರ್ಮಗಂಟು ರೋಗ ಹೋಗಲಾಡಿಸಲು ಸಂಜೀವಿನಿಯಾಗಿದ್ದು, ರೈತರು ಪ್ರಯೋಜನ ಪಡೆದುಕೊಳ್ಳಬೇಕೆಂದು ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಹೇಳಿದರು.

ಕ್ಷೇತ್ರದ ಚಚಡಿ, ತಡಸಲೂರ ಗ್ರಾಮದ ರೈತರಿಗೆ ಕನ್ಹೇರಿ ಮಠದಲ್ಲಿ ತಯಾರಿಸಿದ ದಿವ್ಯ ಔಷಧವನ್ನು ಶನಿವಾರ ಉಚಿತವಾಗಿ ವಿತರಿಸಿ ಮಾತನಾಡಿದ ಅವರು, ಕನ್ಹೇರಿ ಮಠದ ಅದೃಶ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಕರೊನಾ ಸಂದರ್ಭದಲ್ಲಿ ಒಂದೂವರೆ ಕೋಟಿ ಜನರಿಗೆ ಔಷಧ ನೀಡಿದ್ದು ಇತಿಹಾಸವಾಗಿದೆ. ಗೋ ರಕ್ಷಣೆ, ಸಾವಯವ ಕೃಷಿ ಬೆಳವಣಿಗೆಯೊಂದಿಗೆ, ಈಗ ದನಕರುಗಳ ಕಾಳಜಿ ವಹಿಸುತ್ತಿರುವುದು ಅವರ ಗೋ ಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಚರ್ಮಗಂಟು ರೋಗದ ನಿರ್ಲಕ್ಷೃ ಬೇಡ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬಾರದಂತೆ, ಹರಡದಂತೆ ಸ್ವಚ್ಛತೆ ಹಾಗೂ ಕಾಳಜಿ ವಹಿಸಬೇಕು ಎಂದರು. ಎಸ್‌ಡಿಎಂಸಿ ಸದಸ್ಯರನ್ನು ಸನ್ಮಾನಿಸಲಾಯಿತು. ಬಸನಗೌಡ ಪಾಟೀಲ, ಯಲ್ಲಪ್ಪ ಮೇಟಿ, ಬಸಯ್ಯ ಪೂಜೇರಿ, ನಿಂಗಪ್ಪ ಪಾಟೀಲ, ಮುದುಕಪ್ಪ ಮೇಟಿ, ವೀರಭದ್ರಪ್ಪ ಶಿಂಗಾರಿ, ಶಂಕ್ರಯ್ಯ ಗಣಾಚಾರಿ, ದುಂಡಪ್ಪ ಗಿರಿಜನ್ನವರ, ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೇಸಾಯಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ನೇಸರಗಿ, ನಾರಾಯಣ ರಣಸಿಂಗ, ವಿಜಯ ಪತ್ತಾರ, ಶಿವಪ್ರಸಾದ ಪಾಟೀಲ, ಸುನೀಲ ಹಲಗಿ, ಭದ್ರಯ್ಯ ಹಿರೇಮಠ, ಬೀರಪ್ಪ ಕುರೇರ, ಈರಣ್ಣ ಹುಬ್ಬಳ್ಳಿ, ಶಿವಪ್ಪ ಹುಂಡೇಕರ, ರಾಮಚಂದ್ರ ಚನ್ನಮ್ಮನವರ, ಬಸಪ್ಪ ಮಾಳಗಿ, ಮಲ್ಲಿಕಾರ್ಜುನ ಕೆಂಗೇರಿ, ಗೌಡೇಶ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net