ಕನ್ಹಯ್ಯಲಾಲ್ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ

1Blh5_web
ಬೈಲಹೊಂಗಲದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಪ್ರತಿಭಟನಾ ರ‌್ಯಾಲಿ ಜರುಗಿತು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಚಿತ್ರನಟ ಶಿವರಂಜನ ಬೊಳಣ್ಣವರ, ಗಿರೀಶ ಹರಕುಣಿ, ಚಿದಂಬರ ಮೇಟಿ ಇತರರು ಇದ್ದರು.
Published on

ಬೈಲಹೊಂಗಲ: ಉದಯಪುರದ ಟೈಲರ್ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ, ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ವಿವಿಧ ಸಂಘಟನೆಗಳಿಂದ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಶುಕ್ರವಾರ ಬ್ರಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು. ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಚಿತ್ರನಟ ಶಿವರಂಜನ ಬೊಳಣ್ಣವರ ಮಾತನಾಡಿ, ದೇಶದಲ್ಲಿ ಹಿಂದು ಸಂಘಟಕರ ಮೇಲೆ ನಡೆಯುತ್ತಿರುವ ಹತ್ಯೆ ಖಂಡನೀಯವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳು ಕಠಿಣ ಕ್ರಮ ಜಾರಿಗೆ ತರಬೇಕು ಎಂದರು.

ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಗಿರೀಶ ಹರಕುಣಿ ಮಾತನಾಡಿ, ಇದು ಕೇವಲ ಪ್ರತಿಭಟನೆ ಅಲ್ಲ ಹಿಂದು ಸಮಾಜದಿಂದ ಎಚ್ಚರಿಕೆ. ಎಲ್ಲ ಹಿಂದುಗಳು ಒಗ್ಗಟ್ಟಾಗಿ ಹಿಂದು ಸಮಾಜಕ್ಕಾಗಿ ಬದುಕಬೇಕಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಕಾರ್ಯವಾಹಕ ಚಿದಂಬರ ಮೇಟಿ ಮಾತನಾಡಿ, ಹಿಂದುಗಳ ಮೇಲೆ ಪದೆ ಪದೇ ದಾಳಿಗಳಾಗುತ್ತಿರುವುದು, ತೀವ್ರ ಖಂಡನೀಯ. ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಮಾತನಾಡಿ, ಕೇವಲ ಪ್ರತಿಭಟನೆ ಮಾಡುವುದಷ್ಟೇ
ಅಲ್ಲ, ಪ್ರತಿ ಸಂದರ್ಭದಲ್ಲೂ ಹಿಂದು ಕಾರ್ಯಕರ್ತರು ಮನೆ ಮನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶಿಸಬೇಕಾಗಿದೆ ಎಂದು ಕರೆ ನೀಡಿದರು.

ವಿಎಚ್‌ಪಿ ಉಪಾಧ್ಯಕ್ಷ ರಾಜು ಬಡಿಗೇರ, ಶಿವಾನಂದ ಬಡ್ಡಿಮನಿ, ಸತ್ಸಂಗ್ ಪ್ರಮುಖ ಕಾಶಿನಾಥ ಬಿರಾದಾರ, ಸಾಮರಸ್ಯ ಪ್ರಮುಖ ವಿವೇಕಾನಂದ ಪೂಜಾರ, ಅಶೋಕ ಸವದತ್ತಿ, ಮಾನಿಂಗ ಬಂಡಿವಡ್ಡರ, ರಾಮಚಂದ್ರ ಕಿತ್ತೂರ, ಅಪ್ಪಣ್ಣ ಹಡಪದ, ರಾಘು ಶಿಗೀಹಳ್ಳಿ, ಮಲ್ಲಪ್ಪ ಬೆಳಗಾವಿ, ನಾಗಪ್ಪ ಗುಂಡ್ಲೂರ, ರವಿ ಸಿದ್ಧನಗೌಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net