

ಹೊಳೆನರಸೀಪುರ: ಆಷಾಢ ಮಾಸದ ಕಡೇ ಶುಕ್ರವಾರ ಪಟ್ಟಣದ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿತು.
ಬೆಳಗಿನಿಂದಲೇ ಶ್ರೀಕನ್ಯಕಾಪರಮೇಶ್ವರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ, ವಿವಿಧ ಹೂವುಗಳಿಂದ ಸಿಂಗರಿಸಿ, ಚಾಮುಂಡೇಶ್ವರಿ ಅಲಂಕಾರ ಮಾಡಲಾಗಿತ್ತು. ಸಂಜೆ ದೇವಾಲಯದ ಆವರಣದಲ್ಲಿ ಮಹಿಳೆಯರಿಂದ ಕೀರ್ತನೆ, ಲಲಿತಾ ಸಹಸ್ರಾನಾಮ ಪಠಿಸಲಾಯಿತು. ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು.
ಶ್ರೀ ವಾಸವಾಂಬ ಕೋ-ಆಪರೇಟಿವ್ ಬ್ಯಾಂಕಿನ ಸಿಬ್ಬಂದಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆರ‌್ಯವೈಶ್ಯ ಮಂಡಳಿಯ ಅಧ್ಯಕ್ಷ ಎ.ಆರ್.ರವಿಕುಮಾರ್, ಕಾರ್ಯದರ್ಶಿ ಎಚ್.ಪಿ.ರಮೇಶ್, ಉಪಾಧ್ಯಕ್ಷರಾದ ಎ.ಮಂಜುನಾಥ್, ಮುರುಳಿಧರಗುಪ್ತ , ಮಾಜಿ ಅಧ್ಯಕ್ಷ ಅರುಣ್, ಮಾಜಿ ಕಾರ್ಯದರ್ಶಿ ರಂಗನಾಥಶೆಟ್ಟಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.