ಕನ್ನಡಿಗರಿಗೆ ಹೆಬ್ಬಾಳೆ ಅವಮಾನ

Suresh Chennashetty
Published on

ಬೀದರ್: ಸಿರಿಗನ್ನಡ ಪುಸ್ತಕ ಮಳಿಗೆ ಸ್ಥಾಪನೆ ಸಂಬಂಧ ಕರ್ನಾಟಕ ಬರಹಗಾರರ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ತಮ್ಮ ನಿಲುವು ಸಮರ್ಥಿಸಿಕೊಳ್ಳುತ್ತ, ಕನ್ನಡ ಸಾಹಿತ್ಯ ಪರಿಷತ್ ಮಾಡದ ಕೆಲಸ ತಾವು ಮಾಡಿರುವುದಾಗಿ ಹೇಳಿರುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ತಿರುಗೇಟು ನೀಡಿದ್ದಾರೆ.
ಪುಸ್ತಕ ಮಳಿಗೆಗೆ ಸ್ಥಳ ನೀಡಿದ್ದಕ್ಕೆ ಪರಿಷತ್ ವಿರೋಧವಿಲ್ಲ. ಆದರೆ ಕನ್ನಡ ಹೋರಾಟಗಾರರಾಗಿದ್ದ ಪ್ರಭುರಾವ ಕಂಬಳಿವಾಲೆ ಹೆಸರಿನ ಬಸ್ ನಿಲ್ದಾಣ ಸ್ಥಳಾಂತರಿಸಿ, ಅದೇ ನಿವೇಶನ ಪಡೆದುದ್ದಕ್ಕೆ ನಮ್ಮ ವಿರೋಧವಿದೆ. ಬೇರೆಡೆ ಒಂದು ಎಕರೆ ಸ್ಥಳ ನೀಡಿದರೂ ನಮ್ಮ ವಿರೋಧ ಇರುತ್ತಿರಲಿಲ್ಲ. ಕನ್ನಡ ಹೋರಾಟಗಾರರಿಗೆ ಅವಮಾನಿಸಿದರೆ ಖಂಡಿಸುವುದು ಕಸಾಪ ಹಾಗೂ ಕನ್ನಡಪರ ಸಂಘಟನೆಗಳ ಕರ್ತವ್ಯ. ಕಂಬಳಿವಾಲೆ ಅವರ ಸ್ಮಾರಕ, ಭವನ ನಿಮರ್ಾಣಕ್ಕೆ ಮುಂದಾಗುವುದನ್ನು ಬಿಟ್ಟು ಇರುವಂಥ ತಂಗುದಾಣ ತೆರವುಗೊಳಿಸಿರುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಸಾಪ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಜಿಲ್ಲಾ ಕಸಾಪ 50 ವರ್ಷಗಳಿಂದ ತನ್ನ ನಿಯಮಕ್ಕೆ ಬದ್ಧವಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತ ಬಂದಿದೆ. ಈಗಿನ ಪರಿಷತ್ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿದೆ. ಸ್ವತಃ ಕಸಾಪಕ್ಕೆ ಮೂರು ಅವಧಿಗೆ ಅಧ್ಯಕ್ಷರಾದ ಹೆಬ್ಬಾಳೆ ಪರಿಷತ್ ಬಗ್ಗೆ ಹಗುರ ಮಾತನಾಡಿರುವುದು ಹಾಸ್ಯಾಸ್ಪದ ಎಂದು ಟಾಂಗ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net