ಕನ್ನಡಿಗರಿಗೆ ಮಹಾರಾಷ್ಟ್ರದಲ್ಲಿ ಉದ್ಯೋಗ ಮಾಡಲು ಬಿಡಲ್ಲ: ಶಿವಸೇನೆ ಮುಖಂಡನಿಂದ ಧಮ್ಕಿ

Oplus_131072
Oplus_131072
Published on

ಕನ್ನಡಿಗರಿಗೆ ಮಹಾರಾಷ್ಟ್ರದಲ್ಲಿ ಉದ್ಯೋಗ ಮಾಡಲು ಬಿಡಲ್ಲ: ಶಿವಸೇನೆ ಮುಖಂಡನಿಂದ ಧಮ್ಕಿ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಬೆಳಗಾವಿ ಕಂಡೆಕ್ಟರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ,ಮಹಾರಾಷ್ಟ್ರದ ಸಾರಿಗೆ ಬಸ್ ಗಳ ತಡೆದ ಕನ್ನಡ ಪರ ಸಂಘಟನೆಗಳ ಬಗ್ಗೆ ಶಿವಸೇನೆ ಮುಖಂಡ ನಾಲಿಗೆ ಹರಿ ಬಿಟ್ಟಿದ್ದಾನೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಶಿವಸೇನೆ ಮುಖಂಡ ವಿಜಯ ದೇವಣೆ ಕಲಬುರ್ಗಿಯಲ್ಲಿ ಮಹಾರಾಷ್ಟ್ರ ಬಸ್ ಚಾಲಕನಿಗೆ ಹಳದಿ ಕೆಂಪು ಬಣ್ಣ ಹಚ್ಚಿದ್ದಾರೆ ಇದು ಮೃಗಗಳಂತೆ ಕನ್ನಡ ಸಂಘಟನೆಗಳು ವರ್ತಿಸಿವೆ ಎಂದು ಹೇಳಿಕೆ ನೀಡಿದ್ದಾನೆ.

ಕನ್ನಡ ಸಂಘಟನೆ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮ ಜರುಗಿಸಬೇಕು. ಇಲ್ಲವಾದರೆ ನಾವು ಕರ್ನಾಟಕ ಬಸ್ ತಡೆಯಲ್ಲಾ ಆದ್ರೆ ಮುಂಬೈ ಸೇರಿ ಮಹಾರಾಷ್ಟ್ರದಲ್ಲಿ ಕನ್ನಡಿಗರು ಉದ್ಯೋಗ, ವ್ಯಾಪಾರ ಮಾಡಲು ಬಿಡುವುದಿಲ್ಲ

ನಾವು ಶಿವಾಜಿ ಮಹಾರಾಜರ್ ಸ್ವರಾಜದ ಸಂಕೇತದ ಕೇಸರಿ ಧ್ವಜವನ್ನು ಕರ್ನಾಟಕ ಬಸ್ ಗೆ ಕಟ್ಟಿದ್ದೆವೆ, ಆದ್ರೆ ಕನ್ನಡ ಹೋರಾಟಗಾರರು ಕಪ್ಪು ಮಸಿ, ಹಳದಿ ಕೆಂಪು ಬಣ್ಣ ಹಚ್ಚಿದ್ದಾರೆ.ಕನ್ನಡ ಸಂಘಟನೆ ಕಾರ್ಯಕರ್ತರು ಮೃಗಗಳಂತೆ ವರ್ಣಿಸಿದ್ದಾರೆ ಎಂದು ಧಮ್ಕಿ ಹಾಕಿದ್ದಾರೆ. ಶಿವಸೇನೆ ಮುಖಂಡನ ಹೇಳಿಕೆಗೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net