ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕೊಡಿ

bdr
ಬೀದರ್‌ನಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯP್ಷÀ ಪೀಟರ್ ಚಿಟಗುಪ್ಪ, ಜಗನ್ನಾಥ ಕೌಠಾ, ಸೈಯದ್ ನವಾಜ್, ಪ್ರದೀಪ ಕೋಟೆ, ಮೋಸಿನ್ ಪಟೇಲ್, ಪ್ರಕಾಶ ಬಗದಲಕರ್, ಪಿಂಟೂ ಸಿರ್ಸಿ ಇತರರಿದ್ದರು.
Published on

ಬೀದರ್: ರಾಜ್ಯದ ಖಾಸಗಿ ಕೈಗಾರಿಕೆಗಳು ಇತರ ಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಧೇಯಕ ಜಾರಿಗೆ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‍್ಯಾಲಿ ನಡೆಸಿದ ವೇದಿಕೆ ಪ್ರಮುಖರು, ಕಾರ್ಪೋರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ವಿಧೇಯಕ ತಡೆಹಿಡಿದಿದ್ದು ಸರಿಯಲ್ಲ ಎಂದು ಕಿಡಿಕಾರಿದರು.

ಖಾಸಗಿ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.50 ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ ಕಡ್ಡಾಯಗೊಳಿಸಿರುವ ವಿಧೇಯಕಕ್ಕೆ ಸಿಎಂ ಸಿದ್ದರಾಮಯ್ಯ ಅಧ್ಯP್ಷÀತೆಯ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿಲಾಗಿತ್ತು. ಇದೀಗ ಖಾಸಗಿ ಕಂಪನಿಗಳ ವಿರೋಧಕ್ಕೆ ಮಣಿದು ಸರ್ಕಾರ ಹಿಂದೆ ಸರಿದಿದೆ ಎಂದು ದೂರಿದರು.

ಈ ನೆಲದ ಜಾಗ, ನೀರು ಇತರ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ಬಳಸಿಕೊಂಡ ಖಾಸಗಿ ಕಂಪನಿಗಳು ನಾಡಿಗೆ ದ್ರೋಹ ಮಾಡುತ್ತಿವೆ. ಕಾರ್ಪೋರೇಟ್ ಕಂಪನಿ ಮಾಲೀಕರ ಕನ್ನಡ ವಿರೋಧಿ ನೀತಿ ಖಂಡನೀಯ. ಆಂಧ್ರ, ಹರಿಯಾಣಗಳಲ್ಲೂ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲಾಗಿದೆ. ಅದರಂತೆ ಖಾಸಗಿ ಕೈಗಾರಿಕೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಧೇಯಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಜಿಲ್ಲಾಧ್ಯP್ಷÀ ಪೀಟರ್ ಚಿಟಗುಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುನೀತಾ ಮರಕಲ್, ಪ್ರಮುಖರಾದ ಸೈಯದ್ ನವಾಜ್, ಜಗನ್ನಾಥ ಕೌಠಾ (ಬಿ), ಮೋಸಿನ್ ಪಟೇಲ್, ನಾಗೇಶ ರಾಯಣ್ಣೋರ್, ಪ್ರದೀಪ ಕೋಟೆ, ಪ್ರಕಾಶ ಬಗದಲಕರ್, ಪಿಂಟೂ ಸಿರ್ಸಿ, ವಿಜಯಕುಮಾರ, ಸೈಮನ್ ಮೇತ್ರೆ, ನಿಲೇಶ ರಾಠೋಡ್, ಶಿವು ಮಡಿವಾಳ, ಯೋಹಾನ್ ಮೀಸೆ, ಆಗಸ್ಟಿನ್ ಮೇತ್ರೆ, ಚಂದ್ರಕಾAತ ಪೋಳ, ಮೋಜಸ್ ಆಣದೂರೆ, ಜಾÀರ್‌ಮಿಯಾ, ಪ್ರಸಾದ ಘೋಡಂಪಳ್ಳಿಕರ್, ಶಿವು ಮೇತ್ರೆ ಇತರರಿದ್ದರು. ಬೇಡಿಕೆ ಸಂಬAಧ ಸಿಎಂಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net