ಕನ್ನಡಿಗರ ನೆಲ ಜಲ ಭಾಷೆ ಉಳಿವಿಗಾಗಿ ಪ್ರತಿಯೊಬ್ಬರು ಸಂಘಟರಾಗಲು ಕರೆ

IMG-20241213-WA0055
Published on

ಚಾಮರಾಜನಗರ: ಜಿಲ್ಲೆಯಲ್ಲಿ ಬರುವ ಗಡಿ ಪ್ರದೇಶಗಳಾದ ಬಂಡಿಪುರ, ಮನೆ ಮಹದೇಶ್ವರ ಬೆಟ್ಟ, ಹಾಗೂ ಬಿಳಿಗಿರಂಗನಾಥ ಸ್ವಾಮಿ ಅರಣ್ಯ ಅರಣ್ಯ ಪ್ರದೇಶಗಳು ಹಾಗೂ ಕಂದಾಯ ಭೂಮಿಯಲ್ಲಿ ಕನ್ನಡಿಗರಿಗೆ ಸೇರಿದ ಭೂಮಿಯನ್ನು ಪರಭಾಸಿಗರು ಖರೀದಿಸುವ ಮೂಲಕ ಕನ್ನಡಿಗರನ್ನು ವಲಸೆ ಹೋಗುವ ಪರಿಸ್ಥಿತಿಗೆ ತಂದಿದ್ದಾರೆ ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕೆಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಪುಣಜನೂರು ಗ್ರಾಮದಲ್ಲಿ ನಡೆದ ಕನ್ನಡಿಗರ ಹಿತರಕ್ಷಣೆ ಹಾಗೂ ಕ್ರೀಡಾ ಸಾಂಸ್ಕೃತಿಕ ವೇದಿಕೆಯ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನೆಲ ಜಲ ಭಾಷೆಯ ವಿಚಾರದಲ್ಲಿ ಮೊದಲಿನಿಂದಲೂ ಕನ್ನಡಿಗರಿಗೆ ಅನ್ಯಾಯ ಉಂಟಾಗುತ್ತಿದೆ , ಪುನಜನೂರು ಗಡಿ ಭಾಗದಲ್ಲಿ ಪರಭಾಸಿಗರು ಸಾವಿರಾರು ಎಕರೆ ಜಮೀನನ್ನು ಅಕ್ರಮವಾಗಿ ಖರೀದಿಸಿದ್ದಾರೆ, ಕನ್ನಡಿಗರು ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ, ಈ ಬಗ್ಗೆ ಅನೇಕ ಹೋರಾಟ ನಡೆಸಿದ್ದರು ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು. ಕನ್ನಡ ಸಂಘಟನೆಗಳ ಮುಖಂಡರು ಇಂತಹ ಪ್ರಕರಣಗಳ ಬಗ್ಗೆ ಪ್ರಶ್ನಿಸುವ ಮೂಲಕ ಕನ್ನಡಿಗರಿಗೆ ನ್ಯಾಯ ಕಲ್ಪಿಸ ಕೊಡಬೇಕೆಂದು ತಿಳಿಸಿದರು.

ಕಾವೇರಿ ಗಾಗಿ ಕನ್ನಡಿಗರು ನಿರಂತರವಾಗಿ ಹೋರಾಟ ಮಾಡಲಾಗುತ್ತಿದ್ದರು ತಮಿಳುನಾಡು ಸರ್ಕಾರ ಕನ್ನಡಿಗರ ತಾಳ್ಮೆಯನ್ನು ಕೆಣಕುತ್ತಿದೆ, ಹೊಗೇನಕಲ್ ಜಲಪಾತ ಕರ್ನಾಟಕಕ್ಕೆ ಸೇರಿದರು ಕೂಡ ಅಲ್ಲಿ 400 ಎಕರೆ ನಡುಗೆಡ್ಡೆ ಪ್ರದೇಶವನ್ನು ತಮಿಳುನಾಡು ಸರ್ಕಾರ ಅತಿಕ್ರಮಿಸಿಕೊಂಡು ಅರಣ್ಯ ಬೆಳೆಸುವ ಪ್ರಕ್ರಿಯೆಗೆ ಮುಂದಾಗಿತ್ತು, ಇದನ್ನು ಎಲ್ಲಾ ಕನ್ನಡ ಸಂಘಟನೆಗಳು ಪ್ರತಿಭಟಿಸಿದಾಗ ಅಂದಿನ ಜಿಲ್ಲಾಧಿಕಾರಿ ಹರ್ಷ ಗುಪ್ತ ತಮಿಳುನಾಡಿಗೆ ಪತ್ರ ಬರೆದು ಸರ್ವೆ ಮಾಡಿಸುವ ಮೂಲಕ ಕರ್ನಾಟಕಕ್ಕೆ ಉಳಿಯುವಂತೆ ಮಾಡಿದರು ಹೀಗಾಗಿ ಪ್ರತಿಯೊಬ್ಬ ಕನ್ನಡಿಗರು ಕನ್ನಡ ನೆಲ ಜಲ ಭಾಷೆ ಸಂಸ್ಕೃತಿ ಉಳಿವಿಗಾಗಿ ಶ್ರಮಿಸಬೇಕೆಂದು ತಿಳಿಸಿದರು.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಾ.ಗು. ನಾಗರಾಜು ಅವರು ಮಾತನಾಡಿ ಪುನಜನೂರಿನಲ್ಲಿ ಇಂದು ಅಳವಡಿಸಿರುವ ಕನ್ನಡ ಸಂಘಟನೆಯ ನಾಮಫಲಕ ತೆಗೆದು ಹಾಕುತ್ತೇವೆಂಬ ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿಕೆಯನ್ನು ಖಂಡಿಸಿದ ಅವರು ಒಂದು ವೇಳೆ ನಾಮಪಲಕವನ್ನು ತೆರವುಗೊಳಿಸಿದರೆ ಉಗ್ರವಾದ ಹೋರಾಟ ರೂಪಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕ ವೆಂಕಟೇಶ್ ಅವರು ಮಾತನಾಡಿ ಪುನಜುನೂರು ಗಡಿ ಭಾಗದಲ್ಲಿ ಸರ್ಕಾರ ಗಡಿ ಭವನ ನಿರ್ಮಿಸಬೇಕು, ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಮೂಲಸೌಕರ್ಯವನ್ನು ಕಲ್ಪಿಸುವ ಮೂಲಕ ಗಡಿ ಭಾಗಕ್ಕೆ ಬರುವ ಕನ್ನಡಿಗರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು. ಈ ಭಾಗ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪ್ರದೇಶವಾಗಿದ್ದು ಆಗಿದ್ದಾಗೆ ವಾಹನಗಳ ದಟ್ಟಣೆಯಿಂದ ಗಿರಿ ಜನರು ಆಸ್ಪತ್ರೆಗಳಿಗೆ ತೆರಳಲು ತೊಂದರೆಯಾಗುತ್ತಿದೆ, ಈ ಬಗ್ಗೆ ಎಸ್ಪಿ ಡಿಸಿ ಅವರಿಗೆ ತಿಳಿಸಿದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದ್ದರಿಂದ ಇನ್ನು ಮುಂದಾದರೂ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆರ್. ಸುರೇಶ್ ವಹಿಸಿದ್ದರು, ಇದೇ ಸಂದರ್ಭದಲ್ಲಿ ಆಶ್ರಮ ಶಾಲೆ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸೋಲಿಗ ನೃತ್ಯ, ಕನ್ನಡ ಹಾಡುಗಳಿಗೆ ನೃತ್ಯ, ನಡೆದು ಎಲ್ಲರನ್ನೂ ಆಕರ್ಷಿಸಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಜಾಕೀರ್, ಕಾರ್ಯದರ್ಶಿ ಮನೋಜ್ ಕುಮಾರ, ಕರವೇ ಅಧ್ಯಕ್ಷ ಆರ್ ಮೋಹನ್, ರಿಯಾಜ್ ಪಾಸ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿವಿ ಬಾಯಿ ಗಣೇಶ ನಾಯ್ಕ, ಪಿ ಎ ಸಿ ಸಿ ಸಂಘದ ಅಧ್ಯಕ್ಷ ಮುತ್ತು ನಾಯ್ಕ, ನಿರ್ದೇಶಕರಾದ ಗುರು ನಾಯಕ, ಪುಟ್ಟಸ್ವಾಮಿಗೌಡರು, ಪ್ರವೀಣ, ಬೊಮ್ಮಮ್ಮ, ಜನಪದ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net