

ಬೀದರ್: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಬುಧವಾರ ವಿನೂತನ ಕಾರ್ಯಕ್ರಮ ಸಾಹಿತಿ ಸಂಗಮದಲ್ಲಿ ಭಾಗಿಯಾಗಿ ಕನ್ನಡ ನಾಡು-ನುಡಿಯ ಅಭಿಮಾನ, ಪ್ರೇಮ ಮೆರೆದರು.
ಬೆಳಗ್ಗೆ 11.30ರಿಂದ ಬಿಡುವಿಲ್ಲದೇ ನಗರಾದ್ಯಂತ ಸಂಚರಿಸಿದ ಸಚಿವರು, ವಿವಿಧ ಸಾಹಿತಿಗಳ ಮನೆಗೆ ಭೇಟಿ ನೀಡಿ, ಸಾಹಿತ್ಯ ಕೃತಿಗಳ ವಿತರಣೆ, ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಮಾಡಿದರು. ಸಾಹಿತಿಗಳೂ ಆದ ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಅಕ್ಕ ಅನ್ನಪೂರ್ಣ, ಸಾಹಿತಿಗಳಾದ ಡಾ.ಸಂಜೀವಕುಮಾರ ಅತಿವಾಳೆ, ರಮೇಶ ಬಿರಾದಾರ, ಪ್ರೊ.ಎಸ್.ವಿ.ಕಲ್ಮಠ್, ರಘುನಾಥ ಹಡಪದ, ಸುನೀತಾ ಬಿರಾದಾರ, ರಜಿಯಾ ಬಳಬಟ್ಟಿ, ಮೇನಕಾ ಪಾಟೀಲ್, ಗುರುನಾಥ ಅಕ್ಕಣ್ಣ, ಜಗದೇವಿ ದುಬಲಗುಂಡಿ, ಪುಷ್ಪಾ ಕನಕ, ಡಾ.ಕಾಶಿನಾಥ ಚಲುವಾ, ಎಸ್.ಎಂ.ಜನವಾಡಕರ್, ಶ್ರೀದೇವಿ ಹೂಗಾರ, ಪ್ರೊ.ಓಂಪ್ರಕಾಶ ದಡ್ಡೆ, ಡಾ.ರಘುಶಂಖ ಭಾತಂಬ್ರಾ, ಸುನೀತಾ ದಾಡಗೆ, ಸುಭಾಷ ನೇಳಗೆ, ಸಾಧನಾ ರಂಜೋಳಕರ್ ಅವರನ್ನು ಸಚಿವರು ಭೇಟಿ ಮಾಡಿ ಸನ್ಮಾನಿಸಿದರು.
ತಮ್ಮ ಮನೆಗೆ ಬಂದ ಸಚಿವರನ್ನು ಸಾಹಿತಿಗಳು ಸಹ ಸನ್ಮಾನಿಸಿ ಬರಮಾಡಿಕೊಂಡರು. ಈ ವೇಳೆ ಸಾಹಿತಿಗಳು ಮತ್ತು ಅವರ ಕುಟುಂಬದವರು ಸಚಿವರ ಜತೆಗೆ ಫೋಟೊ ಕ್ಲಿಕಿಸಿಕೊಂಡರು.
ಕೆಲ ಸಾಹಿತಿಗಳ ಮನೆ ಭೇಟಿ ವೇಳೆ ಸಂಸದ ಭಗವಂತ ಖೂಬಾ ಸಹ ಸಚಿವರಿಗೆ ಸಾಥ್ ನೀಡಿದರು.ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನ ಶೆಟ್ಟಿ, ಕಾರ್ಯದರ್ಶಿ ಬಸವರಾಜ ಬಲ್ಲೂರ್, ಸಾಹಿತಿ ದೇಶಾಂಶ ಹುಡಗಿ, ಶಿವಶಂಕರ ಟೋಕರೆ, ಎಂ.ಪಿ.ಮುದಾಳೆ, ಶಿವು ಪಾಟೀಲ್, ದೇವೇಂದ್ರ ಕರಂಜೆ, ಕಸ್ತೂರಿ ಪಟಪಳ್ಳಿ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಇತರರಿದ್ದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಸಾಹಿತಿ ಸಂಗಮ ಕಾರ್ಯಕ್ರಮ ರೂಪಿಸಿ, ಸಾಹಿತಿಗಳ ಮನೆಗೆ ಭೇಟಿ ನೀಡುತ್ತಿರುವ ಸಚಿವ ಪ್ರಭು ಚವ್ಹಾಣ್ ಅವರ ಕನ್ನಡ ನಾಡು, ನುಡಿ ಬಗೆಗಿನ ಕಾಳಜಿ ಅಭಿನಂದನಾರ್ಹ.ಸುರೇಶ ಚನ್ನಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ