ಕನ್ನಡವನ್ನು ಶ್ರೀಮಂತಗೊಳಿಸಿದ ಶ್ರೇಷ್ಠಕವಿ ದ.ರಾ.ಬೇಂದ್ರೆ

3blrp3
Published on

ಬೇಲೂರು: ಕನ್ನಡವನ್ನು ಶ್ರೀಮಂತಗೊಳಿಸಿದ ಮಹಾ ಶ್ರೇಷ್ಠಕವಿ ದ.ರಾ.ಬೇಂದ್ರೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹೊಯ್ಸಳ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ವರಕವಿ ದ.ರಾ.ಬೇಂದ್ರೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡತನದಲ್ಲಿ ಬೆಂದಿದ್ದರೂ ಕಥೆ, ಕವನ, ಸಾಹಿತ್ಯ, ಜಾನಪದ ಹಾಡುಗಳ ಮೂಲಕ ಬೇಂದ್ರೆ ಅವರು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟವರು ಎಂದು ತಿಳಿಸಿದರು.

ಹೊಯ್ಸಳ ಕಾಲೇಜಿನ ಪ್ರಾಂಶುಪಾಲ ಆರ್.ನಿರಂಜನ್, ಶಾಂತಲಾ ಮಹಿಳಾ ಕಾಲೇಜು ಉಪನ್ಯಾಸಕ ಎಚ್.ಸಿ.ಸುಜಯ್ ಮಾತನಾಡಿದರು.

ಹೊಯ್ಸಳ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮುರಳೀಧರ, ಕಸಾಪ ಬಿಕ್ಕೊಡು ಹೋಬಳಿ ಕಾರ್ಯದರ್ಶಿ ತಮ್ಮಣ್ಣಗೌಡ, ನಿಕಟಪೂರ್ವ ಅಧ್ಯಕ್ಷ ಶಿವಮೂರ್ತಿ, ಕಾರ್ಯದರ್ಶಿ ಮಹೇಶ್, ಹೊಯ್ಸಳ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಂದೀಶ್, ಕಸಾಪದ ಕುಮಾರಸ್ವಾಮಿ, ಸುಲೇಮಾನ್, ಸಾಹಿತಿ ರವಿಕಿರಣ್ ಗುಜ್ಜರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net