

ಹಗರಿಬೊಮ್ಮನಹಳ್ಳಿ: ಕರ್ನಾಟಕದ ಇತಿಹಾಸಕ್ಕೊಂದು ಸಂಸ್ಕಾರ, ಸಂಸ್ಕೃತಿ ಇದೆ ಎಂದು ಶಾಸಕ ಕೆ.ನೇಮಿರಾಜ್ ಹೇಳಿದರು.
ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ನಾನಾ ಕಲೆಗಳ ತವರೂರು. ಇಲ್ಲಿ ಸಿಗುವಂತ ನೈಸರ್ಗಿಕ ಕೊಡುಗೆಗಳು ದೇಶಕ್ಕೆ ಮಾದರಿ. ಕರ್ನಾಟಕ ಏಕೀಕರಣಕ್ಕಾಗಿ ಆಲೂರು ವೆಂಕಟರಮಣ ಸೇರಿ ಹಲವರು ಜನ ಹೋರಾಟ ಮಾಡಿದವರಾಗಿದ್ದಾರೆ.
ಕನ್ನಡಭಾಷೆ, ನೀರು, ಭೂಮಿ ವಿಷಯ ಬಂದಾಗ ನಾವೆಲ್ಲ ಜಾತಿಗಳನ್ನು ಮೀರಿ ಹೋರಾಟ ಮಾಡೋಣ. ಗಡಿಭಾಗದ ಕನ್ನಡಿಗರನ್ನು, ಕನ್ನಡ ನೆಲ-ಜಲ ಉಳಿಸುವ ಅನೇಕ ಕನ್ನಡಪರ ಸಂಘಟನೆಗಳಿಗೆ ಬೆಂಬಲ ನೀಡಿ. ಬೇರೆ ಭಾಷೆಗಳನ್ನು ಪ್ರೀತಿಸಿ, ನಮ್ಮ ಭಾಷೆಯನ್ನು ಹೆಚ್ಚು ಬಳಸಿ ಎಂದರು.
ಪುರಸಭೆ ಅಧ್ಯಕ್ಷ ಮರಿರಾಮಪ್ಪ ಮಾತನಾಡಿ, ಕರ್ನಾಟಕದ ನೆಲಕ್ಕೆ ದಾಳಿ ಮಾಡಿದ ಬ್ರೀಟೀಷರ ವಿರುದ್ಧ ಹೋರಾಟ ಮಾಡಿದ ಕನ್ನಡಿಗರು ಜೀವಗಳನ್ನೇ ತ್ಯಾಗಮಾಡಿದರು. ಹೂಗೂ ಏಕೀಕರಣಕ್ಕೆ ಅನೇಕರು ಹೋರಾಟ ಮಾಡಿದವರನ್ನು ಪ್ರತಿಯೊಬ್ಬರು ಕನ್ನಡಭಾಷೆ ಪ್ರೀತಿಸಿದರೆ, ಕನ್ನಡ ತಾನಾಗೆಯೇ ಬೆಳೆಯುತ್ತೆ ಎಂದರು.
ಕರ್ನಾಟಕ ರಾಜ್ಯೋತ್ಸವವನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಿಯಮ್ಮನಹಳ್ಳಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ತಹಸೀಲ್ದಾರ್ ಆರ್.ಕವಿತಾ, ಕಸಾಪ ತಾಲೂಕು ಅಧ್ಯಕ್ಷ ಗೂಳೆಪ್ಪ ಹುಲಿಮನಿ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪುರಸಭೆ ಉಪಾಧ್ಯಕ್ಷ ಅಂಬಿಕಾ ದೇವೇಂದ್ರ, ನಾಮ ನಿರ್ದೇಶಕ ಮಂಜುನಾಥ, ತಾಪಂ ಇಒ ಪರಮೇಶ್ವರಪ್ಪ, ಬಿಇಒ ಮೈಲೇಶ್ ಬೇವೂರ್,
ತಾ.ದೈ.ಶಿಕ್ಷಣಾಧಿಕಾರಿ ಸೋಮಪ್ಪ, ಬಿಸಿಎಂ ಸಹ ನಿರ್ದೇಶಕ ರಮೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಜಿಪಂ ಎಇಇ ಶಿವಕುಮಾರ್‌ನಾಯ್ಕ, ಕೃಷಿ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್, ಗ್ರಾಮಲೆಕ್ಕಾಧಿಕಾರಿ ಯಂಕಾರೆಡ್ಡಿ ಪ್ರಮುಖರಾದ ಹೋಟಲ್ ಸಿದ್ದರಾಜ್, ಡಿಶ್ ಮಂಜುನಾಥ, ಗೂಳೆಪ್ಪ, ಡಾ.ಸೂರಪ್ಪ, ಡಾ.ಪ್ರವೀಣ್, ಭಾರತ್ ಸೇವಾದಳದ ಸೋಮನಗೌಡ, ಕೆ.ಪ್ರಕಾಶ್‌ಗೌಡ ಇತರರು ಇದ್ದರು.