ಕನ್ನಡಪರ ಸಂಘಟನೆ ವತಿಯಿಂದ ಪ್ರತಿಭಟನೆ

02rajesh3
Published on

ಚಾಮರಾಜನಗರ: ಜಿಲ್ಲೆಯಲ್ಲಿರುವ ಭ್ರಷ್ಟ ಅಧಿಕಾರಿಗಳನ್ನು ತೊಲಗಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ವತಿಯಿಂದ ಮಂಡಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಭವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ವಿವಿಧ ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ನಮ್ಮನೆ ಪ್ರಶಾಂತ್ ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಭ್ರಷ್ಟ ಅಧಿಕಾರಿಗಳು ಇದ್ದು, ಅವರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇಂತಹ ಅಧಿಕಾರಿಗಳನ್ನು ಸರ್ಕಾರದ ಸೇವೆಗಳಿಂದ ವಜಾಗೊಳಿಸಬೇಕು. ಅವರ ಸೇವಾ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರ ಸುರೇಶ್ ವಾಜಪೇಯಿ ಮಾತನಾಡಿ, ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳ ಹಾವಳಿ ಹೆಚ್ಚಾಗಿದೆ. ಸರ್ಕಾರವು ಅಂತಹ ಅಧಿಕಾರಿಗಳನ್ನು ವರ್ಗವಣೆ ಮಾಡಿದರೂ, ರಾಜಕಾರಣಿಗಳಿಗೆ ಹಣಕೊಟ್ಟು ಮತ್ತೆ ಅದೇ ಸ್ಥಾನಕ್ಕೆ ಬರುವುದು ವಾಡಿಕೆಯಾಗಿದೆ. ಇಂತಹ ಅಧಿಕಾರಿಗಳು ಮತ್ತೇ ಜಿಲ್ಲೆಗೆ ಬಂದರೇ, ಚಾಮರಾಜನಗರ ಬಂದ್‌ಗೆ ಕರೆ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಯುಕ್ತ ಹುದ್ದೆಯಿಂದ ಬಿಡುಗಡೆಗೊಂಡ ಎಸ್.ಸಿ.ರಾಮದಾಸ್ ಭಾವಚಿತ್ರವನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಚಾ.ಗು.ನಾಗರಾಜು, ಸಂಘಸೇನಾ, ಶಿವಶಂಕರ್ ಚಟ್ಟು, ಸಿದ್ದಾರ್ಥ್, ಉಮ್ಮತ್ತೂರು ಚಂದ್ರು, ದೊರೆಸ್ವಾಮಿ, ಎಂ.ಮಲ್ಲಯ್ಯನಪುರ, ಭಾನುಪ್ರಕಾಶ್, ಶಂಕರ ಸಿ.ಅಂಕನಶೆಟ್ಟಿಪುರ, ಎಸ್.ನಾಗರಾಜು, ಉಷಾದೇವಿ, ವಿಜಯಕುಮಾರ್ ಜಟ್ಟಪ್ಪ, ಶಿವಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net