

ಬಾಗಲಕೋಟೆ: ಓನಕೆ ಓಬವ್ವ ಕನ್ನಡ ನೆಲದ ವೀರವನಿತೆಯರ ಸಂಕೇತವಾಗಿದ್ದು, ಓಬವ್ವ ದೇಶಪ್ರೇಮ ಯುವಶಕ್ತಿಗೆ ಪ್ರೇರಣೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಶಿವಾನಂದ ಜೀನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಿಂದ ಹಮ್ಮಿಕೊಂಡ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರವನಿತೆ ಒನಕೆ ಓಬವ್ವನ ಸಾಹಸ ಮುಂದಿನ ಪೀಳಿಗೆಗೂ ಸಾರುವಂತದ್ದು. ಅಂತಹ ಽÃರ ಮಹಿಳೆ ಜನಿಸಿದ ನಾಡಾಗಿದೆ. ಬೆಳವಡಿ ಮಲ್ಲಮ್ಮ, ಕಿತ್ತೂರ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಇವರೆಲ್ಲ ಈ ನೆಲದ ವೀರವನಿತೆಯರ ಸಂಕೇತವಾಗಿದ್ದಾರೆ, ಇಂಥ ವೀರನಾರಿಯರನ್ನು ಪಡೆದ ಈ ಭೂಮಿ ನಿಜಕ್ಕೂ ಶ್ರೇಷ್ಠ ಎಂದರು.
ಶಿವಾನಂದ ಟವಳಿ ಪ್ರಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಬಸವರಾಜ ಯಂಕಂಚಿ, ರಾಜು ರೇವಣಕರ, ಸತ್ಯನಾರಾಯಣ ಹೇಮಾದ್ರಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಶಿವಲೀಲಾ ಪಟ್ಟಣಶೆಟ್ಟಿ, ಶಶಿಕಲಾ ಮಜ್ಜಗಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ ಇದ್ದರು.