ಕನ್ನಡದ ಮನಸ್ಸುಗಳ ಒಗ್ಗೂಡಿಸುವ ಕೆಲಸವಾಗಲಿ

18 yelandur 01
ಯಳಂದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಸದಸ್ಯರ ಸಭೆಯಲ್ಲಿ ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಮಾತನಾಡಿದರು.
Published on

ಯಳಂದೂರು: ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿ ನಾಡು, ನುಡಿ ಕಟ್ಟುವ ಕೆಲಸಕ್ಕೆ ಎಲ್ಲರೂ ಜಾತಿ, ಧರ್ಮ, ಪಕ್ಷ ಭೇದವನ್ನು ಮರೆತು ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕರವೇ ಸದಸ್ಯರ ಸಭೆಯಲ್ಲಿ ಮಾತನಾಡಿ, ನಮ್ಮ ಜಿಲ್ಲೆ ಕರುನಾಡಿನಲ್ಲಿ ಭಾಷೆ, ಕಲೆ, ಸಂಸ್ಕೃತಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಜಾನಪದದ ಸೊಗಡನ್ನು ನಾವು ಇನ್ನಷ್ಟು ಶ್ರೀಮಂತಗೊಳಿಸುವ ಕೆಲಸ ಮಾಡಬೇಕಿದೆ ಎಂದರು.

ಪಟ್ಟಣದಲ್ಲಿ ಶತಮಾನ ಕಂಡ ಕನ್ನಡ ಶಾಲೆ ಶಿಥಿಲಾವಸ್ಥೆಯಲ್ಲಿದ್ದು, ಇದರ ರಕ್ಷಣೆ ಮಾಡಬೇಕಿದೆ. ಹೃದಯಭಾಗದಲ್ಲಿರುವ ಭೂಲಕ್ಷ್ಮೀ ವರಾಹಸ್ವಾಮಿ ದೇಗುಲವನ್ನು ಜೀರ್ಣೋದ್ಧಾರ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆಯುವ ಕೆಲಸ ಮಾಡಬೇಕು. ಗೌರೇಶ್ವರ, ಬಳೇಮಂಟಪಗಳ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಒತ್ತಡ ಹೇರಬೇಕು ಎಂದು ತಿಳಿಸಿದರು.

ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಕಡಿಮೆ ಇದೆ, ಹಿಂದಿ, ಇಂಗ್ಲಿಷ್ ಮಾತನಾಡುವ ಅಧಿಕಾರಿಗಳು ಹೆಚ್ಚಾಗಿದ್ದು, ವ್ಯವಹಾರ ಮಾಡಲು ಭಾಷೆ ತೊಡಕಾಗಿದೆ. ಕನ್ನಡದಲ್ಲೇ ವ್ಯವಹರಿಸಬೇಕೆಂಬ ಒತ್ತಡ ತರಬೇಕು, ನಮ್ಮ ಕನ್ನಡ ಶಾಲೆಗಳ ರಕ್ಷಣೆ ಮಾಡಬೇಕು. ಪಕ್ಷ, ಜಾತಿ, ಧರ್ಮವನ್ನು ಬೆರೆಸದೆ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗೆ ಹೋರಾಟ ಮಾಡಬೇಕು. ನಮ್ಮದು ಗಡಿ ಜಿಲ್ಲೆಯಾಗಿದ್ದು ಇದರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸದಸ್ಯರಿಗೆ ಸಲಹೆ ನೀಡಿದರು.

ಸೆ.20ರಂದು ಪ್ರವೀಣ್ ಶೆಟ್ಟಿ ಜನ್ಮದಿನ. ಅಂದು ಕನ್ನಡ ಶಾಲಾ ಮಕ್ಕಳಿಗೆ ಸವಲತ್ತು, ಗಿಡ ನೆಡುವುದು, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಪಪಂ ಮಾಜಿ ಸದಸ್ಯರಾದ ವೈ.ವಿ.ಉಮಾಶಂಕರ, ವೈ.ಆರ್.ಭೀಮಪ್ಪ, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಮುಖಂಡರಾದ ಚಾಮಲಾಪುರ ವಿಜಯ್, ಎನ್.ಕುಮಾರ್, ಮೀರೆ ಸಿದ್ದರಾಜು, ಶಿವಪ್ರಸಾದ್, ಗುರುಪ್ರಸಾದ್, ಪುನೀತ್‌ರಾಜ್, ಪ್ರದೀಪ್‌ಕುಮಾರ್, ಕುಮಾರ್, ಮುನವ್ವರ್‌ಬೇಗ್, ಅಮ್ಜದ್‌ಖಾನ್, ಪ್ರಕಾಶ್, ರಮೇಶ್, ಗಣೇಶ್, ಬಂಗಾರು, ವೆಂಕಟೇಶ್, ಗುರುರಾಜ್, ಕೆ. ವೆಂಕಟೇಶ್, ಶ್ರೀನಿವಾಸ್ ಪ್ರಸಾದ್, ಸೋಮಣ್ಣ, ಕಂದಹಳ್ಳಿಮಹೇಶ್, ನಾಗೇಂದ್ರ ಮೌರ್ಯ, ನವೀನ್, ನಿಖಿಲ್, ರಾಜು, ಶ್ರೀನಿವಾಸ್ ಸೇರಿದಂತೆ ಅನೇಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net