ಕನ್ನಡದ ಮಕ್ಕಳು ಸಾಧಕರಾಗಲಿ

1905 KLB 04
Published on

ಕಲಬುರಗಿ: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಎಂದಿಗೂ ಮುಂದೆ ಇರುತ್ತಾರೆ. ಮಾತೃಭಾಷೆಯಲ್ಲಿ ಆ ಶಕ್ತಿ ಇದ್ದು, ಯಪಿಎಸ್‌ಸಿ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಕನ್ನಡದ ಕೀರ್ತಿ ಹೆಚ್ಚಲಿ ಎಂದು ಮಾಧ್ಯಮ ಅಕಾಡೆಮಿ ಸದಸ್ಯ ದೇವಿಂದ್ರಪ್ಪ ಕಪನೂರ ಆಶಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಗರದ ಶಕುಂತಲಾ ಪಾಟೀಲ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಕನ್ನಡ ಅಂಕ ಪಡೆದ ಅಂಕವೀರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡವನ್ನು ಮೂಲವಾಗಿ ಇಟ್ಟುಕೊಂಡು ಹೊಸ ಹೊಸ ಕೋರ್ಸ್ಗಳನ್ನು ಆಯ್ಕೆ ಮಾಡಿ ಅಲ್ಲಿಯೂ ಕನ್ನಡವನ್ನು ಬಿತ್ತಬೇಕು ಎಂದು ಹೇಳಿದರು.

ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಮಾತನಾಡಿ, ಕನ್ನಡದಲ್ಲಿ ಹೆಚ್ಚು ಅಂಕ ಪಡೆಯುವ ಮೂಲಕ ಕನ್ನಡ ಭಾಷೆ, ಉಳಿಸುವುದರೊಂದಿಗೆ ನಾಡಿನ ಹಿರಿಮೆ ಹೆಚ್ಚಿಸಬೇಕು ಎಂದರು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷ ಸೇವಂತಾ ಚವ್ಹಾಣ್ ಮಾತನಾಡಿ, ವಿದ್ಯಾರ್ಥಿನಿಯರು ಹೆಚ್ಚಿನ ಅಂಕ ಪಡೆದು ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ನೀಡಬೇಕು ಎಂದು ಹೇಳಿದರು.

ಕಾಲೇಜಿನ ಅಧ್ಯಕ್ಷ ಡಾ.ಚಿದಂಬರಾವ ಪಾಟೀಲ್ ಮಾತನಾಡಿ, ನಮ್ಮ ಭಾಗದ ವಿದ್ಯಾರ್ಥಿಗಳು ಅತ್ಯಂತ ಶ್ರದ್ಧೆಯಿಂದ ಅಧ್ಯಯನ ಮಾಡುತ್ತಿದ್ದು, ಸಾಧಕರಾಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸಹಾಯ, ಸಹಕಾರ, ಪ್ರೋತ್ಸಾಹ ನೀಡಬೇಕು ಎಂದರು.
ಅಕಾಡೆಮಿಕ ನಿರ್ದೇಶಕ ಡಾ.ಮನೋಜಕುಮಾರ ಬುರುಬುರೆ, ಕಿರಣ ಗಾದಗಿ, ಡಾ.ಪ್ರೇಮ ಸಿಂಗ್ ಚವ್ಹಾಣ್, ಶರಣು ಹಾಗರಗುಂಡಗಿ, ಪ್ರಭವ ಪಟ್ಟಣಕರ, ವೀರಣ್ಣ ಸಿನ್ನೂರ, ಆಕಾಶ ಮರಪಳ್ಳಿ, ಸಿದ್ದರಾಮ ಇತರರಿದ್ದರು. ವಿಶಾಲಕ್ಷಿ ಮಾಯಣ್ಣವರ ನಿರೂಪಣೆ ಮಾಡಿದರು. ಕೋಶಾಧ್ಯಕ್ಷ ಕುಪೇಂದ್ರ ಬರಗಾಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net