ಕನ್ನಡದ ಅಸ್ಮಿತೆಗಾಗಿ ಕವಿಗಳ ಹೋರಾಟ ಅಪಾರ

23M.D.R.4
ಮದ್ದೂರು ತಾಲೂಕಿನ ಚಿಕ್ಕ ಹೊಸಗಾವಿ ಗ್ರಾಮದಲ್ಲಿ ಸಹಸ್ರ ಕೋಟಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಅಪ್ಪು ನಮನ ಕಾರ್ಯಕ್ರಮವನ್ನು ಕಸಾಪ ಸಂಘಟನಾ ಕಾರ್ಯದರ್ಶಿ ಯಡವನಹಳ್ಳಿ ಸಿ.ಎಂ.ಕ್ರಾಂತಿಸಿಂಹ ಉದ್ಘಾಟಿಸಿದರು. ಬೆಟ್ಟಸ್ವಾಮಿಗೌಡ, ರತ್ನಮ್ಮ, ಎಚ್.ಎಸ್.ಚಂದ್ರು, ಸುಮಲತಾ ಇದ್ದರು.
Published on

ಮದ್ದೂರು: ಕನ್ನಡ ನಾಡು ನುಡಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕನ್ನಡದ ಅಸ್ಮಿತೆಗಾಗಿ ಕವಿಗಳ ಹೋರಾಟ ಅಪಾರವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಯಡವನಹಳ್ಳಿ ಸಿ.ಎಂ.ಕ್ರಾಂತಿಸಿಂಹ ಸ್ಮರಿಸಿದರು.

ತಾಲೂಕಿನ ಚಿಕ್ಕ ಹೊಸಗಾವಿ ಗ್ರಾಮದಲ್ಲಿ ಸಹಸ್ರ ಕೋಟಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಅಪ್ಪು ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ಕದಂಬ, ಗಂಗರು, ಚಾಲುಕ್ಯರು. ಹೊಯ್ಸಳರು ಸೇರಿದಂತೆ ಹಲವು ಮನೆತನಗಳು ಆಳ್ವಿಕೆ ಮಾಡಿವೆ. ರಾಜರ ಕಾಲದಿಂದಲೂ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ ಎಂದರು.

ಸಹಸ್ರ ಕೋಟಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಗೌಡ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಗ್ರಾಮೀಣ ಭಾಗದಲ್ಲೂ ಕನ್ನಡ ಮಾಯವಾಗಿ ಅನ್ಯ ಭಾಷೆಗಳು ಬೇರೂರುತ್ತಿವೆ. ನಾವು ನವೆಂಬರ್ ಕನ್ನಡಿಗರಾಗದೆ ನಂಬರ್ ಒನ್ ಕನ್ನಡಿಗರಾಗಬೇಕು. ಕನ್ನಡ ನಾಡು ನುಡಿಯ ವಿಚಾರ ಬಂದಾಗ ನಾವೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಸರ್ಕಾರಗಳು ಕನ್ನಡ ನಾಡು, ನುಡಿಯ ಉಳಿವಿನ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದರು.

ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಚೈತ್ರಾ, ಡಾ.ಸಿ.ವಿ.ಯೋಗರಾಜೇಗೌಡ, ಯೋಗಾನಂದ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಎಚ್.ಎಸ್.ಚಂದ್ರು, ಸದಸ್ಯರಾದ ಆಶಾಮಣಿ, ಭಾಗ್ಯಮ್ಮ, ಪುಟ್ಟಸ್ವಾಮಿ, ಶೋಭಾ, ಕಮಲಾ, ಮಂಚೇಗೌಡ, ಧನಂಜಯ, ಪಿಡಿಒ ಸುಮಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net