

ಕಲಬುರಗಿ: ರಾಜ್ಯ ರ‍್ಕಾರದ ಆದೇಶದಂತೆ ರ‍್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಕಡ್ಡಾಯವಾಗಿ ಪ್ರತಿ ನಾಮಲಕಗಳಲ್ಲಿ ಶೆ.೬೦ ಕನ್ನಡ ಇರಬೇಕು. ಆದರೆ ಕಲಬುರಗಿಯ ಕಣ್ಣಿ ತರಕಾರಿ ಮಾರುಕಟ್ಟೆ ಸಂಕರ‍್ಣ ಕಟ್ಟಡದ ಮೇಲೆ ಕನ್ನಡ ಅಳವಡಿಸಿ, ತೆರವು ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಅಧಿಕಾರಿಗಳ ಮುಖಕ್ಕೆ ಕಪ್ಪು ಮಸಿ ಬಳಿದಿದ್ದೇವೆ. ಇದರಲ್ಲಿ ರಾಜಕೀಯ, ಯಾರದ್ದು ಕುಮ್ಮಕ್ಕು ಇಲ್ಲ ಎಂದು ರ‍್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಸ್ಪಷ್ಟಪಡಿಸಿದರು.
ಕಪ್ಪು ಮಸಿ ಬಳಿಯುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ರಾಜಕೀಯ, ರ‍್ಮದ ಬಣ್ಣ ಬಳಿಯುತ್ತಿರುವುದು ಸರಿಯಲ್ಲ. ಬೇಡಿಕೆ ಬಂದಂತೆ ಒಂದೊಂದು ಭಾಷೆಯನ್ನು ಉಲ್ಲೇಖಿಸುತ್ತ ಹೊರಟರೇ ನಾಳೆ ಮರಾಠಿ, ತೆಲುಗು, ರಾಜಸ್ಥಾನಿಗಳು ಹಿಂದಿ ಸೇರಿದಂತೆ ಎಲ್ಲವೂ ಬೇಡಿಕೆ ಬರುತ್ತದೆ. ಕನ್ನಡ ಭಾಷೆಯ ನಾಮಲಕವೇ ಇರಲಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ನಗರದ ಎಲ್ಲ ಶಾಲಾ, -ಕಾಲೇಜು, ಅಂಗಡಿ ಮುಂಗಟ್ಟು, ಮಾಲ್, ಆಸ್ಪತ್ರೆಗಳ ನಾಮಲಕಗಳ ಮೇಲೆ ಸೆ.೩೦ರೊಳಗೆ ಕನ್ನಡ ಕಡ್ಡಾಯವಾಗಿ ಹಾಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಗಡುವು ನೀಡುತ್ತೇವೆ. ಬದಲಾವಣೆ ಕಾಣದಿದ್ದಲ್ಲಿ ಅ.೧ರಂದು ಕನ್ನಡ ಬಳಸದ ನಾಮಲಕಗಳನ್ನು ಒಡೆದು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ, ಪಾಲಿಕೆ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕರವೇಯಿಂದ ೩-೪ ರ‍್ಷದಿಂದ ಕನ್ನಡ ನಾಮಲಕ ವಿಚಾರವಾಗಿ ಮನವಿ ಪತ್ರ ಸಲ್ಲಿಸುತ್ತಿದ್ದರೂ ಸ್ಪಂದಿಸುತ್ತಿಲ್ಲ. ಮುಂದೆ ಆಗುವ ಟನೆಗಳಿಗೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆ ಎಂದರು.
ಮಹೇಶ ಕಾಶಿ, ಅಪ್ಪು ಕೇತ್ರಿ, ರಾಜು ಸ್ವಾಮಿ, ರವೀಂದ್ರ ವಿಶ್ವರ‍್ಮ, ಶ್ರೀಕಾಂತ ಇದ್ದರು.