ಕನ್ನಡ ಹಬ್ಬ, ಪ್ರಶಸ್ತಿ ಪ್ರದಾನ 10ಕ್ಕೆ

Vijayasene
Published on

ಚಿತ್ರದುರ್ಗ: ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಈ ಬಾರಿಯು ಕರುನಾಡ ವಿಜಯಸೇನೆಯಿಂದ ಮಾ. 10ರಂದು ಸಂಜೆ 5.40 ಕ್ಕೆ ಕನ್ನಡ ಹಬ್ಬ, ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರುನಾಡ ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಪದ ಗಾಯಕ ಡಾ.ಮಹದೇವಸ್ವಾಮಿ ಮಳವಳ್ಳಿ ಅವರಿಗೆ ರಾಜಾವೀರ ಮದಕರಿನಾಯಕ, ಲೇಖಕಿ ಬಾ.ಹ. ರಮಾಕುಮಾರಿ ಅವರಿಗೆ ಒನಕೆ ಓಬವ್ವ ಪ್ರಶಸ್ತಿ ಜತೆಗೆ 20 ಸಾವಿರ ರೂ. ನಗದು ನೀಡಿ ಸನ್ಮಾನಿಸಲಾಗುವುದು. ಸರಿಗಮಪ ಹಾಗೂ ಗಿಚ್ಚಿಗಿಲಿಗಿಲಿ ತಂಡದಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ ಎಂದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರಿಗೆ ಕೋಟೆನಾಡಿನ ರಾಜಕೀಯ ಭೀಷ್ಮ, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿಗೆ ಕೋಟೆನಾಡಿನ ಶಿಕ್ಷಣ ಕ್ರಾಂತಿಕಾರಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಕೋಟೆನಾಡಿನ ರಾಜಕೀಯ ಸುಪುತ್ರ ಬಿರುದು ನೀಡಿ ಸನ್ಮಾನಿಸಲಾಗುವುದು ಎಂದು ಹೇಳಿದರು.

ಸಮಾಜದಲ್ಲಿ ಪಾದರಕ್ಷೆ ಹೊಲಿಯುವವರು, ಕ್ಷೌರಿಕರು, ಅನಾಥ ಶವಗಳನ್ನು ಸಂಸ್ಕಾರ ಮಾಡುವವರು, ಬಟ್ಟೆ ಇಸ್ತ್ರಿ ಮಾಡುವವರು, ಪೌರ ಕಾರ್ಮಿಕರು, ಆಸ್ಪತ್ರೆಗಳಲ್ಲಿ ಶವಗಳ ಮರಣೋತ್ತರ ನಡೆಸುವವರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಹೇಳಿದರು.

ವಿಜಯಸೇನೆ ಮಹಿಳಾ ಅಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ಗೋಪಿನಾಥ್, ಅಣ್ಣಪ್ಪ, ನಿಸಾರ್ ಅಹಮದ್, ರತ್ನಮ್ಮ, ಪ್ರದೀಪ್, ಜಗದೀಶ್, ಸುರೇಶ್, ಅಖಿಲೇಶ್, ಮಣಿಕಂಠ, ಹರೀಶ್‌ಕುಮಾರ್, ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net