ಕನ್ನಡ ಸ್ನೇಹ ಬಳಗದಿಂದ ಗಣ್ಯರಿಗೆ ಸನ್ಮಾನ

26
Published on

ಮೈಸೂರು: ಸರಸ್ವತಿಪುರಂನ ಕನ್ನಡ ಸ್ನೇಹ ಬಳಗದಿಂದ ಶಾಸಕ ಕೆ.ಹರೀಶ್‌ಗೌಡ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸನ್ಮಾನಿಸಲಾಯಿತು.
ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕಳೆದ ಬಾರಿ ಶಾಸಕನಾಗಿದ್ದಾಗ ಉತ್ತಮವಾಗಿಯೇ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಹರೀಶ್‌ಗೌಡ ಅವರು ತಮಗೆ ಟಿಕೆಟ್ ಸಿಗುತ್ತದೆಯೋ, ಇಲ್ಲವೋ ಎಂಬ ಚಿಂತೆಯನ್ನು ಮಾಡದೇ ತಮ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಉತ್ತಮ ರಾಜಕೀಯ ಅನುಭವವಿದೆ. ಅಲ್ಲದೆ ಕೋವಿಡ್ ವೇಳೆ ಅವರು ಮಾಡಿದ ಕೆಲಸ ಶ್ಲಾಘನೀಯ ಎಂದರು.
ಚಿಂತಕ ಕೆ. ಕಾಳಚನ್ನೇಗೌಡ, ಕಾವಲು ಪಡೆ ಅಧ್ಯಕ್ಷ ಎಂ. ಮೋಹನ್‌ಕುಮಾರ್‌ಗೌಡ, ಲೇಖಕ ಟಿ. ಸತೀಶ್ ಜವರೇಗೌಡ, ಬಂದೀಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net