ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ

Basavkalyan 1
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ದತ್ತಾತ್ರೇಯ ಗಾದಾ, ಸಿಪಿಐ ಅಲಿಸಾಬ್, ಅರ್ಜುನ ಕನಕ, ಮನೋಹರ ಮೈಸೆ, ಡಾ.ರವೀಂದ್ರ ನಾರಾಯಣಪುರ, ರಮೇಶ ಸುಲ್ಪಿ, ರಾಜು ಬಣಕಾರ, ದಿಲೀಪಕುಮಾರ ಉತ್ತಮ ಇದ್ದರು.
Published on

ಬಸವಕಲ್ಯಾಣ: ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ. ದಾಸ ಸಾಹಿತ್ಯಕ್ಕೆ ಮಹತ್ವ ಬಂದಿದ್ದೇ ಸಂತ ಕನಕದಾಸರಿಂದ ಎಂದು ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರವೀಂದ್ರ ನಾರಾಯಣಪುರ ಹೇಳಿದರು.

ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಸೋಮವಾರ ಏರ್ಪಡಿಸಿದ್ದ ಕನಕದಾಸ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಸಮಾಜ ಮತ್ತು ದಾಸ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆಯನ್ನು ಕನಕದಾಸರು ಸಲ್ಲಿಸಿದ್ದಾರೆ. ಜಾತಿ- ಮತ ಮತ್ತು ಸಮಾಜದ ಪಿಡುಗುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವಂಥ ಭಾಷೆಯಲ್ಲಿ ಹೇಳಿದ ಅವರ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಹಸೀಲ್ದಾರ್ ದತ್ತಾತ್ರೇಯ ಜೆ.ಗಾದಾ ಮಾತನಾಡಿದರು. ತಾಪಂ ಇಒ ರಮೇಶ ಸುಲ್ಪಿ, ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ, ಸಿಪಿಐ ಅಲಿಸಾಬ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ, ಪ್ರಮುಖರಾದ ಅರ್ಜುನ ಕನಕ, ಮನೋಹರ ಮೈಸೆ, ಬಂಡೆಪ್ಪ ಮೇತ್ರೆ, ಚಂದ್ರಕಾಂತ ಮೇತ್ರೆ, ಸುಭಾಷ ರೇಕುಳಗಿ, ಮಾರುತಿ ಸೂರ್ಯವಂಶಿ ತಳಭೋಗ, ಹಾಲಪ್ಪ ಭೂರೆ, ಮಹಾಳಪ್ಪ ಕೋಹಿನೂರ, ನವನಾಥ ಮಂಗಳೂರೆ, ಘಾಳೆಪ್ಪ ರೇಕುಳಗೆ, ಬಾಲು ಪೂಜಾರಿ, ಸಂಬಣ್ಣ ಗೌಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net