

ಕಲಬುರಗಿ: ಕರ್ನಾಟಕ ರP್ಷÀಣಾ ವೇದಿಕೆ ಉತ್ತರ ಕರ್ನಾಟಕ ವತಿಯಿಂದ ಉತ್ತರ ಕರ್ನಾಟಕ ಭಾಗದ ಜಿ¯್ಲೆಗಳಲ್ಲಿ ನ.೧ರಿಂದ ಕನ್ನಡ ಭಾಷೆ ಹಾಗೂ ಕನ್ನಡ ಶಾಲೆಗಳ ಉಳಿಸಿ ಮತ್ತು ಬೆಳೆಸಿ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ವೇದಿಕೆ ಅಧ್ಯP್ಷÀ ಶರಣು ಗದ್ದುಗೆ ಹೇಳಿದರು.
ಅಭಿಯಾನದಲ್ಲಿ ಮೂಲ ಸೌಲಭ್ಯಗಳು ಇಲ್ಲದ ಶಾಲೆಗಳಿಗೆ ಸೌಲಭ್ಯ ಒದಗಿಸಲು ಹೋರಾಟ, ಕನ್ನಡ ಭಾಷಾ ಜಾಗೃತಿ ಮೂಡಿಸಲಾಗುತ್ತಿದೆ. ಮೂಲಸೌಲಭ್ಯಗಳ ಕೊರತೆ ಇರುವ ಕುರಿತು ಸಾರ್ವಜನಿಕರು ಪತ್ರ ಬರೆದರೆ ಅದನ್ನು ಶಿಕ್ಷಣ ಇಲಾಖೆ ಗಮನಕ್ಕೆ ತಂದು ಪರಿಹಾರ ಒದಗಿಸುವ ವಿಭಿನ್ನ ಪ್ರಯತ್ನ ನಡೆಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನ್ಯ ಭಾಷೆಗಳ ಹಾವಳಿಯಿಂದ ಕನ್ನಡ ಮಂಕಾಗಿ ಕಾಣುತ್ತಿದೆ. ಇದನ್ನು ಬೆಳೆವಣಿಗೆ ಹೊಂದಲು ಮತ್ತು ಉಳಿಸಲು ಎಲ್ಲರ ಪ್ರಯತ್ನ ಅಗತ್ಯವಾಗಿದೆ. ಗಡಿ ಭಾಗದಲ್ಲಿ ಕನ್ನಡ ಶಾಲೆಗಳಲ್ಲಿ ಕನ್ನಡ ಶಿP್ಷÀಕರಿಲ್ಲ ಎಂಬುದು ಸೇರಿ ನಾನಾ ಸಮಸ್ಯೆ ಕಾಡುತ್ತಿವೆ. ಗಡಿ ಭಾಗ ಅಥವಾ ಇತರ ಗ್ರಾಮಗಳಲ್ಲಿ ಕನ್ನಡ ಭಾಷೆ ಬಳಕೆ ವಿರಳ ಮತ್ತು ಕನ್ನಡ ಶಾಲೆ ಸಮಸ್ಯೆ ಕುರಿತು ನಾಗರಿಕರು ಪತ್ರ ಚಳವಳಿ ಮೂಲಕ ನಮ್ಮ ಸಂಘಟನೆಗೆ ಗಮನಕ್ಕೆ ತರಬೇಕು ಎಂದರು.
ಸಾರ್ವಜನಿಕರು ಅಧ್ಯಕ್ಷರು, ಕರವೇ ಉತ್ತರ ಕರ್ನಾಟಕ, ಕೇಂದ್ರ ಕಚೇರಿ, ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆ, ಶಹಾಪುರ, ಯಾದಗಿರಿ ೫೮೫೨೨೩ ವಿಳಾಸಕ್ಕೆ ಪತ್ರ ಬರೆಬಹುದು. ಮಾಹಿತಿಗೆ ೯೪೪೮೦೧೨೭೧೬ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಂಘಟನೆಯ ಅಭಿಷೇಕ ಬಾಲಾಜಿ, ಗೋಪಾಲ ನಾಟೀಕಾರ, ಸಂಜು ಕುಸನೂರ, ಶರಣ ಇದ್ದರು.