ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಉನ್ನತ ಹುದ್ದೇಗೇರಬಹುದು ನ್ಯಾಯಮೂರ್ತಿ ಪ್ರಸನ್ ವರಾಳೆ ಅಭಿಮತ

10Anand4
Published on

ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಉನ್ನತ ಹುದ್ದೇಗೇರಬಹುದು

ನ್ಯಾಯಮೂರ್ತಿ ಪ್ರಸನ್ ವರಾಳೆ ಅಭಿಮತ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ವಿದ್ಯಾರ್ಥಿಗಳು ತಂತ್ರಜ್ಙಾನದ ಸದ್ಬಳಕೆ, ಹೆಚ್ಚು ಪುಸ್ತಕಗಳನ್ನು ಒದುವುದರ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳಬೇಕು. ವಿದ್ಯಾರ್ಥಿಗಳು ಶ್ರದ್ಧೆ ಭಕ್ತಿಯಿಂದ ಸತತ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಶೇಷವಾಗಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಸಹ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಬಹುದೆಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಸನ್ ವರಾಳೆ ಹೇಳಿದರು.

ಚಿಕ್ಕೋಡಿಯ ಕೆ.ಎಲ್.ಇ. ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಪ್ರಾರಂಭವಾಗಿ ೨೫ ವರ್ಷ ಪುರೈಸಿದ ನಿಮಿತ್ತ ಕೆ.ಎಲ್.ಇ. ಲಾ ಅಕಾಡೆಮಿ, ವತಿಯಿಂದ ಆಯೋಜಿಸಿದ್ದ ನಾಲ್ಕನೆಯ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನ್ಯಾಯಾಧೀಶರು ನ್ಯಾಯನಿರ್ಣಯ ಮಾಡುವ ಸಂದರ್ಭದಲ್ಲಿ ನಿಸ್ಪಕ್ಷ ಪಾತವಾಗಿ ನ್ಯಾಯದಾನವನ್ನು ಮಾಡಬೇಕು,ಸಂಬಂಧಿಕರು ಅಥವಾ ತಮ್ಮ ಹೆಂಡತಿಯೇ ಬಂದರು ಸಹಿತ ನ್ಯಾಯದ ಪರವಾಗಿಯೇ ನ್ಯಾಯದಾನವನ್ನು ಮಾಡಬೇಕು, ಸಂವಿಧಾನದ ಚೌಕಟ್ಟಿನಲ್ಲಿ ನ್ಯಾಯಾಂಗದ ಪಾವಿತ್ರತೆಯನ್ನು ಕಾಪಾಡಿಕೊಂಡು ಬರಬೇಕೆಂದು ಹೇಳಿದರು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿಜಯಕುಮಾರ ಪಾಟೀಲ ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಅತ್ಯಂತ ಮುಖ್ಯ, ಸ್ಪರ್ಧೆಯಲ್ಲಿ ಭಾಗವಹಿಸಿದ ಕೇವಲ ೨ ತಂಡಗಳಿಗೆ ಮಾತ್ರ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ಕೊಡಲು ಅವಕಾಶವಿರುತ್ತದೆ. ಜಪಾನ, ಚೀನಾ, ಜರ್ಮನಿಯಂತಹ ರಾಷ್ಟ್ರಗಳು ಮೊದಲು ತಮ್ಮ ಭಾಷೆಗಳಿಗೆ ಹೆಚ್ಚಿನ ಆಧ್ಯತೆಯನ್ನು ಕೊಟ್ಟು ಆ ಭಾಷೆಗಳಲ್ಲಿ ಸಂಶೋಧನೆಯನ್ನು ಮತ್ತು ತಾಂತ್ರಿಕ ವಿಷಯಗಳನ್ನು ಅಧ್ಯಯನ ಮಾಡುವಂತೆ ನೋಡಿಕೊಳ್ಳುತ್ತಾರೆ. ಇಂಗ್ಲಿಷ ಭಾಷೆಯು ಆಂಗ್ಲರು ಆಳ್ವಿಕೆ ಮಾಡಿದಂತಹ ರಾಷ್ಟ್ರಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಕೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಲ್ ಇ ಸಂಸ್ಥೆಯ ಕಾರ್ಯಾದ್ಯಕ್ಷರಾದ ಡಾ. ಪ್ರಭಾಕರ ಕೋರೆ ಮಾತನಾಡಿ ಚಿಕ್ಕೊಡಿ ಅತ್ಯಂತ ಹೆಚ್ಚಿನ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳನ್ನು ಹೊಂದಿದ ಪುಣ್ಯಭೂಮಿ. ಈ ಮಣ್ಣಿನ ಗುಣದ ಮಹತ್ವವೆ ಹಾಗಿದೆ ಚಿಕ್ಕೊಡಿಯಲ್ಲಿ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಆಯೋಜಿಸುತ್ತಿರುವುದು ಸಂತಸ ತಂದಿದ್ದು,ಕಾರಣ ಬಹಳಷ್ಟು ಕಕ್ಷಿದಾರರಿಗೆ ತಮ್ಮ ಮಾತ್ರ ಭಾಷೆಯನ್ನು ಬಿಟ್ಟು ಬೇರೆ ಭಾಷೆ ಅರ್ಥವಾಗುವುದಿಲ್ಲ. ನ್ಯಾಯಕ್ಕಾಗಿ ಫಿ ಕೊಟ್ಟವರಿಗೆ ನ್ಯಾಯಾಲಯಗಳಲ್ಲಿ ನಡೆದ ವಾದ ವಿವಾದಗಳ ಅರ್ಥವಾಗಬೇಕೆಂದು ಹೇಳಿದರು.

ವಿಶ್ರಾಂತಿ ನ್ಯಾಯಮೂರ್ತಿ ಎ. ಎಸ್. ಪಾಶ್ಚಾಪುರೆ.

ಉಚ್ಚ ನ್ಯಾಯಲಯದ ನ್ಯಾಯವಾದಿ ಡಾ. ಜಗದೀಶ ಹಾಲಶೆಟ್ಟಿ. ಪ್ರೊ. ಎಸ್. ಬಿ. ನಾಗರಾಳೆ. ಪ್ರಾಚಾರ್ಯ ಡಿ.ಬಿ. ಸೋಲಾಪುರೆ, ನ್ಯಾಯಧೀಶರಾದ ವಿದ್ಯಾಧರ ಶಿರಹಟ್ಟಿ, ಮಾಯಪ್ಪ ಪೂಜೇರಿ, ರಾಹುಲ ರಾವ್, ಜ್ಯೋತಿ ಕಾಗಿನಕರ, ಹರೀಶ ಪಾಟೀಲ , ತ್ರಪ್ತಿ ಧರಣಿ,ಡಾ. ಪ್ರಸಾದ ರಾಮಪುರೆ,ಪ್ರವೀಣ ಪಾಟೀಲ, ಡಾ.ಜ್ಞಾನೇಂದ್ರ ಚೌರಿ, ಡಾ. ವಿಜಯ.ಮುರದಂಡೆ, ಬಿ.ಜಿ. ಕುಲಕರ್ಣಿ, ಪ್ರಕಾಶ ಕೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net