ಕನ್ನಡ ಭುವನೇಶ್ವರಿಗೆ ನಮನ ೩೦ರಂದು

BHUVANESWARI
Published on

ಕಲಬುರಗಿ: ಜೈ ಕನ್ನಡಿಗರ ರಕ್ಷಣಾ ವೇದಿಕೆಯಿಂದ ೬೯ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಗರದ ಕನ್ನಡ ಭವನದಲ್ಲಿ ನ.೩೦ರಂದು ಸಂಜೆ ೫ಕ್ಕೆ ತಾಯಿ ಭುವನೇಶ್ವರಿಗೆ ನಮನ ಸಲ್ಲಿಸಿ, ಸಾಧಕರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚಿನ ಫರಹತಾಬಾದ್ ಹೇಳಿದರು. ಚಿತ್ತಾಪುರದ ಶ್ರೀ ಸೋಮಶೇಖರ ಶಿವಾಚಾರ್ಯರು, ನದಿಸಿನ್ನೂರಿನ ಶ್ರೀ ಗುರುರಾಜೇಂದ್ರ ಶಿವಯೋಗಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದು, ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಯರ್ ಯಲ್ಲಪ್ಪ ನಾಯ್ಕೋಡಿ, ಎಂಎಲ್‌ಸಿ ಬಿ.ಜಿ.ಪಾಟೀಲ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ಸುರೇಶ ಶರ್ಮಾ, ನೀಲಕಂಠರಾವ ಮೂಲಗೆ, ಡಾ.ವಿಕ್ರಂ ಸಿದ್ದಾರೆಡ್ಡಿ, ಚಂದ್ರಕಾAತ ಗದಗಿ ಸೇರಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ವಿವಿಧ ಕ್ಷೇತ್ರದ ಸಾಧಕರಾದ ಡಾ.ಕಿರಣ ಬಿಜಾಪುರಿ, ದಯಾನಂದ ಪಾಟೀಲ್, ಸೋಮನಾಥ ಕಟ್ಟಿಮನಿ, ಶಿವಶರಣ ಆಳಂದ, ನಾಗೇಶ ಡಿ. ಸೇರಿ ೧೨ ಜನರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಲಾವಿದ ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯ ಮಂಜರಿ, ಅನನ್ಯ ಗೋಲ್ಡ್ಸ್ಮಿತ್‌ರಿಂದ ನೃತ್ಯ, ಚನ್ನಪ್ಪರಿಂದ ರಸಮಂಜರಿ ನಡೆಯಲಿದೆ ಎಂದರು. ಸುರೇಶ ಹನಗುಡಿ, ಅP್ಷÀಯ, ಗುಡ್ಡು ಸಿಂಗ್, ಅಣವೀರ ಪಾಟೀಲ್, ರವಿ ಸಜನ್, ಪ್ರಕಾಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net