ಕನ್ನಡ ಭಾಷೆಯನ್ನು ಹೆಮ್ಮೆಯಿಂದ ಬಳಸೋಣ

NOV. 2, HNP., PH.1.
Published on

ಹೊಳೆನರಸೀಪುರ: ಕನ್ನಡ ಭಾಷೆಯನ್ನು ಹೆಮ್ಮೆಯಿಂದ ಬಳಸುವುದರ ಜತೆಗೆ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಸಂಭ್ರಮ ಆಚರಿಸೋಣ ಎಂದು ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಹೊನ್ನಪ್ಪ ತಿಳಿಸಿದರು.


ಪಟ್ಟಣದ ಸೋಷಿಯಲ್ ಕ್ಲಬ್ ಆವರಣದಲ್ಲಿ ಮಂಗಳವಾರ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡವನ್ನು ನಾವು ಮೊದಲು ಬಳಸಿ ನಂತರ ಇತರರಿಗೂ ಭಾಷೆಯನ್ನು ಕಲಿಸುವುದರಿಂದ ಕನ್ನಡ ಬೆಳೆಯುತ್ತದೆ. ಜತೆಗೆ ಕನ್ನಡ ನಾಡು, ನುಡಿ, ಜಲ ಹಾಗೂ ಭೂಮಿ ರಕ್ಷಣೆಗೆ ಸದಾಕಾಲ ನಾವು ಸಿದ್ಧವಾಗಿರಬೇಕು ಎಂದರು.


ಸ್ಲಂ ಬೋರ್ಡ್ ಅಂಗನವಾಡಿ ಕಾರ್ಯಕರ್ತೆ ವಿಜಯಕುಮಾರಿ ಅವರು ಪುಟ್ಟ ಮಕ್ಕಳಿಗೆ ಕನ್ನಡನಾಡಿನ ವೀರ ವನಿತೆಯರು ಹಾಗೂ ಶ್ರೇಷ್ಠ ಪುರುಷರ ವೇಷಭೂಷಣ ತೊಡಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ತಂದರು.


ಸೋಷಿಯಲ್ ಕ್ಲಬ್ ಉಪಾಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಕೆ.ಆರ್.ಸುದರ್ಶನ್ ಬಾಬು, ಖಜಾಂಚಿ ವಿಜಯಕುಮಾರ್, ನಿರ್ದೇಶಕರಾದ ಮುರುಳಿ, ಎಚ್.ಎನ್.ಸುರೇಶ್, ರಂಗರಾಜು, ಎಚ್.ಎನ್.ಬಸವರಾಜು, ಸುರೇಶ್, ನಟರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net