ಕನ್ನಡ ಭಾಷೆಗೆ ಹಲ್ಮಿಡಿ ಶಾಸನದ ಕೊಡುಗೆ ಅಪಾರ:ಎಚ್.ಬಿ. ಮದನ್ ಗೌಡ

filter: 0; fileterIntensity: 0.0; filterMask: 0; brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 328.1836;aec_lux_index: 0;albedo:  ;confidence:  ;motionLevel: -1;weatherinfo: null;temperature: 35;
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 328.1836;aec_lux_index: 0;albedo: ;confidence: ;motionLevel: -1;weatherinfo: null;temperature: 35;
Published on

ಹಾಸನ: ಕನ್ನಡ ಭಾಷೆಗೆ ನಮ್ಮ ಜಿಲ್ಲೆಯಲ್ಲಿ ದೊರೆತ್ತಿರುವ ಹಲ್ಮಿಡಿ ಶಾಸನದ ಕೊಡುಗೆ ಅಪಾರವಾದದ್ದು ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮದನ್‌ಗೌಡ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ರೋಟರಿ ಕ್ಲಬ್ ಹಾಸನ್ ರಾಯಲ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಲ್ಮಿಡಿ ಗ್ರಾಮದಲ್ಲಿ ಕೇವಲ ಒಂದು ಕಲ್ಲಿನ ರೂಪದಲ್ಲಿ ಇದ್ದ ಶಾಸನವನ್ನು ಅಂದಿನ ಸಂಶೋಧಕ ಎಂ.ಎಚ್. ಕೃಷ್ಣಯ್ಯ ಅವರು ಶಾಸನದಲ್ಲಿದ್ದ ಕನ್ನಡದ ಸಾಲುಗಳ ಕುರಿತು ತಿಳಿಸಿಕೊಟ್ಟರು. ರಾಜ್ಯ ಸರ್ಕಾರದ ಅಂದಿನ ಸಚಿವರಾಗಿದ್ದ ರಾಣಿ ಸತೀಶ್ ಅವರು ಶಾಸನದ ಸಂರಕ್ಷಣೆಯ ಜವಾಬ್ದಾರಿ ಮಾಡಿದರು. ಇದಾದ ಬಳಿಕ ಅಂದಿನ ಹಾಸನ ಜಿಲ್ಲಾಧಿಕಾರಿಯಾಗಿದ್ದ ಎಲ್.ಕೆ. ಅತೀಕ್ ಅವರು ಹಲ್ಮಿಡಿ ಶಾಸನದ ಪ್ರತಿರೂಪವಾಗಿ ಮತ್ತೊಂದು ಶಾಸನವನ್ನು ಮಾಡಿಸಿ ಗ್ರಾಮದಲ್ಲಿ ಇರಿ ಅದಕ್ಕೊಂದು ಮಂಟಪದ ಆಕಾರ ನೀಡಿದರು ಎಂದು ತಿಳಿಸಿದರು.

ಹಲ್ಮಿಡಿ ಶಾಸನ ದೊರೆತ ಸ್ಥಳವನ್ನು ಇಂದು ಉದ್ಯಮಿ ರಾಜಶೇಖರ್ ಅವರ ಸಹಕಾರದಿಂದ ಮತ್ತಷ್ಟು ಉನ್ನತ ದರ್ಜೆಗೆ ಅಭಿವೃದ್ಧಿಪಡಿಸಲಾಗಿದ್ದು, ಉದ್ಘಾಟನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಮ್ಮ ಜಿಲ್ಲೆಯ ಕಲೆ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೊಯ್ಸಳ ಮಹೋತ್ಸವ ಆಚರಣೆ ಹಲವು ಕಾರಣಗಳಿಂದ ನಡೆದಿಲ್ಲ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ನಮ್ಮ ಕನ್ನಡ ನಾಡಿನ ಕಲೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನವಾಗಬೇಕು. ಹಾಸನ ಜಿಲ್ಲೆಯೆಂದರೆ ಕೇವಲ ರಾಜಕೀಯ ಎಂಬ ನಾಣುಡಿ ಇದೆ. ಇದನ್ನು ಹೊಗಲಾಡಿಸುವ ಸಲುವಾಗಿ ಕಲೆ, ಸಂಸ್ಕೃತಿಕೆ ಒತ್ತು ನೀಡುವ ಕಲೆಸ ಆಗಬೇಕು. ನಮ್ಮ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳು, ಶಿಲ್ಪ ಕಲೆಗಳು ಇತರೆ ರಾಷ್ಟ್ರಗಳಲ್ಲಿ ಇದ್ದಿದ್ದರೆ ಅದರ ಚಿತ್ರಣವೆ ಬೇರೆ ಇರುತಿತ್ತು. ನಮ್ಮಲ್ಲಿ ಹೆಜ್ಜೆಗೊಂದು ಮದ್ಯದಂಗಡಿ ಮಾಡುವ ಬದಲು ಪುಸ್ತಕದ ಅಂಗಡಿಗಳನ್ನು ಮಾಡಬೇಕಾದ ಅವಶ್ಯಕತೆ ಇದೆ. ಮಕ್ಕಳಿಗೆ ಓದಿಸುವ ನಮ್ಮ ಕಲೆ ಸಂಸ್ಕೃತಿಯನ್ನು ತಿಳಿಸಿಕೊಡುವ ಕೆಲಸವನ್ನು ಇನ್ನಾದರೂ ರಾಜಕೀಯ ನಾಯಕರು ಮಾಡಬೇಕು ಎಂದರು.

ಈಚೆಗೆ ನಡೆದ ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಸಂಸ್ಥೆಯ ವಿಜೇತ ರೋಟರಿ ಸದಸ್ಯರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಹಾಸನ್ ರಾಯಲ್ ಸಂಸ್ಥೆಯ ಅಧಕ್ಷ ಯು.ವಿ. ಸಚ್ಚಿನ್, ಕಾರ್ಯದರ್ಶಿ ಪುನೀತ್, ಖಜಾಂಚಿ ಪಿ. ರವಿ ಕುಮಾರ್, ವಲಯ ಸೇನಾನಿ ಡಾ. ವಿಕ್ರಂ, ಸದಸ್ಯರಾದ ಎಸ್. ಯೋಗೇಶ್, ಬಿ.ಕೆ. ಟೈಮ್ಸ್ ಗಂಗಾಧರ್, ವೇಣುಗೋಪಾಲ್, ಆರ್. ಯೋಗೇಶ್, ಕೆ.ಸಿ. ನವೀನ್, ಡಾ.ಎಂ.ಡಿ. ನಿತ್ಯಾನಂದ, ಸುನೀಲ್, ಚಂದನ್, ವಿನಯ್, ಅತಿಥ್, ದಿಲೀಪ್ ಕುಮಾರ್ ಎಚ್.ಕೆ., ಮಹೇಶ್, ಡಾ.ಎಚ್.ಎನ್. ಹರೀಶ್, ಶ್ರೀನಂದ, ಪಾಂಡು ಕುಮಾರ್, ದರ್ಶನ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net