

ಚಿಕ್ಕೋಡಿ: ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಸಂದಿರುವುದು ಕನ್ನಡ ನಾಡಿಗೆ ಕಳಶ ಪ್ರಾಯವಾಗಿದೆ ಎಂದು ಕೆಎಲ್‌ಇ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಸಾದ ರಾಂಪೂರೆ ಹೇಳಿದರು.
ಇಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಹಬ್ಬ ಐಸಿರಿ-೨೦೨೫ ಕಾರ್ಯಕ್ರಮ ಮಾತನಾಡಿ, ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ನೆಲ, ಜಲ ಉಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಕಲಾವಿದ ಭರತ ಕಲಾಚಂದ್ರ ಮಾತನಾಡಿ, ಜನ್ಮ ಕೊಟ್ಟ ನಾಡಿನ ಋಣ ತೀರಿಸಲು ನಮ್ಮ ಭಾಷೆ ಕನ್ನಡವಾಗಿರಬೇಕು ಎಂದರು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕ ಡಾ.ಕುಮಾರ ಚೌಗಲಾ, ಡಾ.ಸಂಜಯ ಪೂಜೇರಿ, ಡಾ.ಮಹಾಂತಯ್ಯ ಮಠಪತಿ, ಡಾ.ಸಂಜಯ ಅಂಕಲಿ, ಸಂಗೀತಾ ವಾಟೆಗಾಂವಕರ, ವಿದ್ಯಾರ್ಥಿ ಪ್ರತಿನಿಧಿ ಸಂಗಮೇಶ ಬಬಲೇಶ್ವರ ಇತರರಿದ್ದರು. ಡಾ.ಸಚಿನ ಮೆಕ್ಕಳಕಿ ಪರಿಚಯಿಸಿದರು. ಡಾ.ಬಾಹುಬಲಿ ಅಕ್ಕಿವಾಟೆ ಸ್ವಾಗತಿಸಿದರು. ಸಂಜನಾ ಹಾಗೂ ಐಶ್ವರ್ಯ ನಿರೂಪಿಸಿದರು. ಸ್ನೇಹಾ ಶಿರಹಟ್ಟಿ ವಂದಿಸಿದರು.